ಬೆಂಗಳೂರು,ಫೆಬ್ರವರಿ,3,2021(www.justkannada.in): ಬೆಂಗಳೂರಿನ ಯಲಹಂಕದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಏರೋ ಇಂಡಿಯಾ 2021 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕನ್ನಡವೇ ಮಾಯವಾಗಿ ಕೇವಲ ಇಂಗ್ಲೀಷ್ ಮತ್ತು ಹಿಂದಿ ಮಾತ್ರ ವೇದಿಕೆಯಲ್ಲಿ ರಾರಾಜಿಸುತ್ತಿತ್ತು.
ಇತ್ತೀಚೆಗೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲೂ ಇದೇ ರೀತಿ ಕನ್ನಡ ಕಡೆಗಣಿಸಲಾಗಿತ್ತು. ಇದೀಗ ಏರ್ ಶೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲೂ ಇದೇ ರೀತಿ ಕನ್ನಡ ಕಣ್ಮರೆಯಾಗಿದ್ದು, ಈ ಕುರಿತು ‘ಜಸ್ಟ್ ಕನ್ನಡ ಡಾಟ್ ಇನ್’ (ಏರೋ ಇಂಡಿಯಾ : ತ್ರೀ ಭಾಷ ಸೂತ್ರ ಪಾಲಿಸದೆ ಕನ್ನಡ ಕಡೆಗಣನೆ. see more : https://www.justkannada.in/?p=55246) ವರದಿ ಮಾಡಿತ್ತು.
ಇದೀಗ ಕನ್ನಡ ಕಡೆಗಣನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸಿರುವ ಏರೋ ಇಂಡಿಯಾ 2021 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕನ್ನಡ ಕಣ್ಮರೆಯಾಗಿದೆ. ತ್ರಿಭಾಷಾ ಸೂತ್ರ ಮರೆಯಲಾಗಿದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಫಲಕ ಮಾತ್ರ ವೇದಿಕೆಯಲ್ಲಿ ರಾರಾಜಿಸುತ್ತಿದೆ. ಈ ಮೂಲಕ ಕನ್ನಡಕ್ಕೆ ಕನ್ನಡ ನೆಲದಲ್ಲೇ ಅಪಚಾರ ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಕೇಂದ್ರ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಈ ಕುರಿತ ಆಕ್ಷೇಪಗಳಿಗೆ ಉತ್ತರಿಸಿದ್ದ ಕೇಂದ್ರ, ಕನ್ನಡ ಕಡ್ಡಾಯವಲ್ಲ ಎಂದಿತ್ತು. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕಹಿ ನೆನಪು ಮರೆಯುವ ಮೊದಲೇ ಬೆಂಗಳೂರಿನಲ್ಲಿ ಕನ್ನಡಕ್ಕೆ ಅಪಚಾರ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಹೆಚ್.ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇವರ್ಯಾರಿಗೂ ಕನ್ನಡಕ್ಕಾದ ಅಪಮಾನ ಕಾಣಲಿಲ್ಲವೇ..?.
ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿರುವ ಹೆಚ್.ಡಿಕೆ, ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಆಯೋಜಿಸಿರುವ ಏರೋ ಇಂಡಿಯಾ ಕಾರ್ಯಕ್ರಮ ಉದ್ಘಾಟಿಸಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು. ರಾಜ್ಯದ ಹಲವು ನಾಯಕರೂ ಅಲ್ಲಿದ್ದರು. ಇವರ್ಯಾರಿಗೂ ಕನ್ನಡಕ್ಕಾದ ಅಪಮಾನ ಕಾಣಲಿಲ್ಲವೇ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ENGLISH SUMMARY…
JUSTKANNADA IMPACT:
Former CM H.D.Kumaraswamy objects negligence towards Kannada
Bengaluru, Feb. 03, 2021 (www.justkannada.in): The Aero India 2021 Air Show is an international attraction and draws thousands of viewers directly and lakhs through other media including TV. In such a huge event which is taking place in the capital city of Karnataka, Kannada has disappeared and only English and Hindi languages were seen. A similar situation had appeared even at an event that took place in Shivamogga recently. Now Kannada has disappeared at the Air Show event, and it was reported in our ‘justkannada.in’ (we had carried a story under the title Aero India: Negligence towards Kannada without following the tri-language policy. see more:https://www.justkannada.in/?p=55246).
Former Chief Minister H.D. Kumaraswamy who noticed this has expressed his displeasure towards the negligent attitude on Kannada language. In his tweet, he has stated that “Kannada has disappeared in the three-day Aero India 2021 air show that is taking place in Yelahanka, Bengaluru. The tri-language formula is forgotten. Only English and Hindi have appeared on all the boards at the event. It is gross negligence and insult to Kannada and I strongly oppose this.”
He has also has questioned the state leaders including Chief Minister B.S.Yedyurappa who was present at the inaugural event why he didn’t notice this. Is it not an insult meted out to Kannada? he stated in his tweet.
Key words: Former CM- Kumaraswamy -objected – Ignoring-Kannada – Air show
Key words: Former CM- Kumaraswamy -objected – Ignoring-Kannada – Air show