ರಾಮನಗರ ತಲುಪಿದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಂತಿಮಯಾತ್ರೆ: ಅಭಿಮಾನಿಗಳಿಂದ ಅಂತಿಮ ದರ್ಶನ

ರಾಮನಗರ,ಡಿಸೆಂಬರ್,11,2024 (www.justkannada.in):  ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತಿಮಯಾತ್ರೆ ರಾಮನಗರ ತಲುಪಿದ್ದು ರಾಮನಗರದಲ್ಲಿ ಕೆಲಕಾಲ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇಂದು ಹುಟ್ಟೂರು ಸೋಮನಹಳ್ಳಿಯಲ್ಲಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದ್ದು ಮೊಮ್ಮಗ ಅಮರ್ಥ್ಯ ಹೆಗ್ಡೆ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.

ಬೆಂಗಳೂರಿನಿಂದ ಸೋಮನಹಳ್ಳಿಗೆ ಪಾರ್ಥೀವ ಶರೀರ ತರಲಾಗುತ್ತಿದ್ದು, ರಾಮನಗರದ ಐಜೂರಿನಲ್ಲಿ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಪಾರ್ಥೀವ ಶರೀರವನ್ನ ಇಡಲಾಗಿದೆ ಅಭಿಮಾನಿಗಳು ಧೀಮಂತ ನಾಯಕನಿಗೆ ಅಂತಿಮನಮನ ಸಲ್ಲಿಸುತ್ತಿದ್ದಾರೆ.

Key words: Former CM, S.M. Krishna, Ramanagara, Funeral