ಬೆಂಗಳೂರು,ಜೂನ್,20,2022(www.justkannada.in): ವಿಶ್ವ ಯೋಗ ದಿನಾಚಾರಣೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ವಿಪಕ್ಷ ನಾಯಕ ಸಿದ‍್ಧರಾಮಯ್ಯ ನಾಲ್ಕು ಪ್ರಶ್ನೆಗಳನ್ನ ಕೇಳಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನಕ್ಕೂ ಮುನ್ನ , ‘Answermadimodi’ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ದೇಶದ ರೈತರ ಪ್ರತಿರೋಧಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇಲ್ಲಿಯವರೆಗೂ ಕಾಯ್ದೆ ರದ್ದು ಮಾಡಿಲ್ಲ. ಇದು ನಿಮ್ಮ ಸೂಚನೆಯಂತೆ ನಡೆದಿದೆಯಾ? ಅಥವಾ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯೋ? ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಇದರ ಜೊತೆಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಳಂಬ ಮಾಡುತ್ತಿರುವುದು ಯಾಕೆ? ಇದಕ್ಕೆ ಕಾರಣ ತಮಿಳುನಾಡು ಸರ್ಕಾರದ ಒತ್ತಡವೇ? ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ ಪೂರ್ವಾಗ್ರಹವೇ? ಎಂದು ಸಿದ್ಧರಾಮಯ್ಯ ಚಾಟಿ ಬೀಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಹಿಂದಿ ಹೇರಲು ಹೊರಟಿದ್ದಾರೆ. ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಯತ್ನಿಸುತ್ತಿದ್ದಾರೆ. ಮೋದಿ ಅವರೇ, ಕನ್ನಡದ ಅಸ್ಮಿತೆ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮೌನ ಅಮಿತ್ ಶಾ ಅವರ ಹೇಳಿಕೆಗೆ ಸಹಮತವೋ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು ಜನತೆಯ ಬಹುಕಾಲದ ಬೇಡಿಕೆಯಾದ ಬೆಂಗಳೂರು ಉಪನಗರ ರೈಲು ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣವಲ್ಲವೆ? ಈ ಯೋಜನೆಯ ಚಾಲನೆ ಇಷ್ಟೊಂದು ವಿಳಂಬವಾಗಲು ಕೇಂದ್ರ ಸರ್ಕಾರವೇ ಹೊಣೆಯಲ್ಲವೆ? ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
Key words: Former CM –Siddaramaiah- asked- Prime Minister- Modi -four questions.
ENGLISH SUMMARY…
Former CM Siddaramaiah asks PM Modi to answer his 4 questions through hashtag ‘Answermadimodi’
Bengaluru, June 20, 2022 (www.justkannada.in): Prime Minister is in Karnataka on a two-day visit. He will inaugurate the ‘International Day of Yoga’ program at Mysuru and several other programs in the State. Leader of opposition in the Legislative Assembly Siddaramaiah, in a tweet has asked the PM to answer his four questions by tagging the PM.
He tweeted, tagging the Prime Minister before the latter arrived at Bengaluru. The Union Government withdrew the agricultural bill yielding to the severe protests by the farmers. However, the State Govt. has still not cancelled the bill. Is that because of your instructions? Or is it the anti-farmer policy of the State Govt.?
Why is the process of giving approval for the Mekedatu project being delayed? Is it because of the pressure from Tamil Nadu? or Is it because of the prejudice of the Union Govt. against the State?
Union Home Minister is very enthusiastic to enforce Hindi on the States. Modiji, what is your view on the existence of Kannada? Does your silence show your consent to Amit Sha’s statement?
Is not the negligence of the Union Govt. a reason for the delay in implementation of the long pending demand of Bengalureans, the Bengaluru Suburban Railwy project?,” Siddaramaiah’s tweet read.
Keywords: Former CM Siddaramaiah/ questions/ PM Narendra Modi