ಮೈಸೂರು,ಸೆಪ್ಟಂಬರ್,29,2022(www.justkannada.in): ಪಿಎಫ್ ಐ ಕಾಂಗ್ರೆಸ್ ನ ಪಾಪದ ಕೂಸು ಎಂದು ಟೀಕಿಸಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪಿಎಫ್ ಐ ಕಾಂಗ್ರೆಸ್ ನ ಪಾಪದ ಕೂಸಾದರೆ ಆರ್ ಎಸ್ ಎಸ್ ಏನು? ಆರ್ ಎಸ್ ಎಸ್ ಬಿಜೆಪಿಯ ಪಾಪದ ಕೂಸು ಎಂದು ಕುಟುಕಿದರು.
ಭಾರತ್ ಜೋಡೋ ಯಾತ್ರೆಗೆ . ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ವಾಸ್ತವ್ಯಕ್ಕೆ ಎಲ್ಲ ತಯಾರಿ ನಡೆದಿದೆ ಮೈಸೂರಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲ್ಲ. ರಾಹುಲ್ ಗಾಂಧಿ ಕಾರ್ಯಕ್ರಮ ಮಾತ್ರ ಇರಲಿದೆ ಎಂದರು.
ಎಸ್ ಡಿಪಿಐ, ಪಿಎಫ್ ಐ ಎರಡೂ ಬಿಜೆಪಿಯ ಬಿ ಟೀಂ- ಶಾಸಕ ಯತೀಂದ್ರ ಸಿದ್ದರಾಮಯ್ಯ
ಹಾಗೆಯೇ ಶಾಸಕ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಎಸ್ ಡಿಪಿಐ, ಪಿಎಫ್ಐ ಎರಡೂ ಬಿಜೆಪಿಯ ಬಿ ಟೀಂ. ಅವರಿಂದಲೇ ಇವರ ಕೋಮುವಾದಿ ಬೇಳೆ ಬೇಯುತ್ತಿದೆ. ನಿಜವಾಗಲೂ ಅವರಿಗೆ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು. ಚುನಾವಣೆ ಹತ್ತಿರ ಬರ್ತಿದೆ ಅಂತ ಗಿಮಿಕ್. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಬ್ಯಾನ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಗುಂಡ್ಲುಪೇಟೆಯಲ್ಲಿ ಪ್ಲೆಕ್ಸ್ ಹರಿದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ಧರಾಮಯ್ಯ, ಭಾರತ್ ಜೋಡೋಯಾತ್ರೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆಉರಿ ಎಂದು ಕಿಡಿಕಾರಿದರು.
ನಾಡಹಬ್ಬ ದಸರೆಯಲ್ಲೂ ಕಮೀಷನ್ ವಿಚಾರ ಇದೆ ಎಂಬ ವಿಚಾರ ನನಗೂ ಕೇಳಿಬಂದಿದೆ. ನಾಡಹಬ್ಬ ದಸರೆಯಲ್ಲಿ ಅವ್ಯವಸ್ಥೆಗೆ ಬೇಸರವಿದೆ. ಇದರಿಂದ ಮೈಸೂರಿನ ಮಾನ ಹೋಗಿದೆ. ಈ ಬಾರಿ ಸರ್ಕಾರ ದಸರೆ ಯಶಸ್ವಿ ನಡೆಸಲು ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ. ಈ ಅವ್ಯವಸ್ಥೆಯನ್ನ ಅವರೇ ಹೊರಬೇಕು ಎಂದು ವಾಗ್ದಾಳಿ ನಡೆಸಿದರು.
Key words: Former CM -Siddaramaiah – BS Yeddyurappa- PFI-Congress.