ಹುಣಸೂರಿನಲ್ಲಿ ನೂರಕ್ಕೆ ನೂರು ಮಂಜುನಾಥ್ ಗೆಲ್ತಾರೆ: ಚಾಮುಂಡೇಶ್ವರಿಯಲ್ಲಿನ ಸೋಲು ನೆನೆದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

 

ಮೈಸೂರು,ಅ,19,2019(www.justkannada.in):  ಹುಣಸೂರಿನಲ್ಲಿ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಂಜುನಾಥ್  ಈ ಬಾರಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ ಹುಣಸೂರಿನಲ್ಲಿ ಲೀಡ್ ತೆಗೆದುಕೊಂಡಿದ್ದೇವು. ಹೀಗಾಗಿ ಹುಣಸೂರಿನಲ್ಲಿ ನೂರಕ್ಕೆ ನೂರು ಮಂಜುನಾಥ್ ಗೆಲ್ಲಲಿದ್ದಾರೆ. 2OO6 ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ರೀತಿ ಕೆಲಸ ಮಾಡಿ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದರು.

ಶಾಸಕರ ಅಸಮಾಧಾನ ದಿಂದ  ಜೆಡಿಎಸ್ ಹಾಗೂ ನಮ್ಮ ಪಕ್ಷ ಬಿಟ್ಟು ಹೋದ್ರು. ಬಿಜೆಪಿಯವರು ನಿರಂತರವಾಗಿ ಶಾಸಕರನ್ನ  ಕೊಂಡುಕೊಳ್ಳುವ ಕೆಲಸ ಮಾಡಿದ್ರು. ರಾಜ್ಯದಲ್ಲಿ ಆಪರೇಷನ್ ಕಮಲ ಹುಟ್ಟು ಹಾಕಿದ್ದೆ ಬಿಜೆಪಿ, ಮಿಸ್ಟರ್ ಯಡಿಯೂರಪ್ಪ ನೆ ಆಪರೇಷನ್ ಕಮಲದ ರೂವಾರಿ. ಶಾಸಕರಿಗೆ 2O ರಿಂದ 25ಕೋಟಿ ಹಣ ನೀಡಿ ಖರೀದಿಸಿದ್ದಾರೆ. ಅಧಿಕಾರದ ಅಸೆ ತೋರಿಸಿ ಬಿಜೆಪಿ  ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆ. ನಾನು ದಿನೇಶ್ ಗುಂಡೂರಾವ್ ಇಬ್ಬರು ಸೇರಿ ಆ  ಎಲ್ಲಾ ಶಾಸಕರನ್ನ ಡಿಸ್ ಕ್ವಾಲಿಫೈಡ್ ಮಾಡಿ ಎಂದು ಸ್ಪೀಕರ್ ಗೆ ಪತ್ರ ಬರೆದಿದ್ದೆವು. ಹುಣಸೂರಿನಲ್ಲಿ ಗೆದ್ದಿದ್ದವರು ಸಹ  ಅನರ್ಹ ರಾಗಿದ್ದಾರೆ. ನಾನು ಈಗಾಗಲೇ l7 ಕ್ಷೇತ್ರಕ್ಕೂ ಹೋಗಿ ಬಂದಿದ್ದೇನೆ, ಜನ ಕಾಯುತ್ತಿದ್ದಾರೆ, ಪಕ್ಷ ಬಿಟ್ಟವರಿಗೆ  ತಕ್ಕ ಪಾಠ ಕಲಿಸಲು ಎಂದು ನುಡಿದರು.

ಚಾಮುಂಡೇಶ್ವರಿ ಸೋಲು ನೆನೆದ ಸಿದ್ದರಾಮಯ್ಯ…

ಇದೇ ವೇಳೇ ಚಾಮುಂಡೇಶ್ವರಿ ಸೋಲು ನೆನೆದ ಸಿದ್ದರಾಮಯ್ಯ, ಚಾಮುಂಡೇಶ್ವರಿ ನಲ್ಲಿ ಸೋಲುತ್ತಿದ್ದರೂ ನಮ್ಮ ಕಾರ್ಯಕರ್ತರು ಇಲ್ಲಾ ಸರ್ ಗೆಲ್ತಿವಿ ಸರ್ ಗೆಲ್ತಿವಿ ಸರ್ ಅಂತ ಪೇಪರ್ ಹಿಡ್ಕೊಂಡ್ ಬರ್ತಿದ್ರು. ನಾನು 35 ಸಾವಿರ ವೋಟ್ ನಿಂದ ಸೋಲ್ತಿದ್ರು.  ಹೇ ಬಿಡಿ ಸರ್ ಗೆಲ್ತಿರಾ ಎನ್ನುತ್ತಿದ್ದರು ಎಂದು ಹೇಳಿದರು.

ನಾವು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದೆವು. ಅದನ್ನೆಲ್ಲ ಬಿಟ್ಟು ಸಾವರ್ಕರ್ ಗೆ ಕೊಡ್ತಿದ್ದಾರೆ..

ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲು ಹಿಂದುತ್ವ ಎಂಬ ಪದ ಬಳಸಿದ್ದೆ ಸಾವರ್ಕರ್. ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಅವರನ್ನ ಬಂಧಿಸಿದ್ರು. ಅದ್ರಿಂದ  ಭಾರತ ರತ್ನ ಕೊಡೋದು ಬೇಡ ಅಂದೇ ನಾನು ಅಷ್ಟೇ. ಗಾಂಧಿ ಕೊಂದ ಆರೋಪಿಗೆ ಭಾರತ ರತ್ನ ಕೊಡ್ತಾರೆ,  ನಾವು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದೆವು ಅದನ್ನೆಲ್ಲ ಬಿಟ್ಟು ಸಾವರ್ಕರ್ ಗೆ ಕೊಡ್ತಿದ್ದಾರೆ ಎಂದು ಹೇಳಿದರು.

Key words: Former CM- Siddaramaiah – expressed- confidence –hunsur-by election