ಮೈಸೂರು,ಜುಲೈ,23,2022(www.justkannada.in): ರಾಜ್ಯದಲ್ಲಿ ಆರ್ಟಿಕಲ್ 371J ಹಾಗೂ ಅನ್ನಭಾಗ್ಯದಂತಹ ಹಲವು ಜನಪರ ಯೋಜನೆಯ ಜಾರಿಗೆ ತಂದವರು ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, CLP ಲೀಡರ್ ಆಗಿದ್ದಾಗ ಪಾರ್ಲಿಮೆಂಟ್ ಗೆ ಬರಬೇಕು ಎಂದು ಹೈಕಮಾಂಡ್ ಹೇಳಿದರು. ನನ್ನನ್ನ ರಾಜ್ಯರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನ ಮಾಡಿದ್ದೂ ಏನೇ ಇರಬಹುದು. ಇದಕ್ಕೂ ಮುನ್ನ ನನ್ನದೊಂದು ಷರತ್ತು ಇತ್ತು. ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೂ ಆರ್ಟಿಕಲ್ 371J ಜಾರಿಗೆ ತಂದರೆ ಮಾತ್ರ ಚುನಾವಣೆಗೆ ಸ್ಪರ್ದಿಸುತ್ತೇನೆ ಎಂದು ಷರತ್ತು ಹಾಕಿದ್ದೆ. ಅದಕ್ಕೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ರು.ಒಪ್ಪಿಗೆ ತೆಗೆದುಕೊಂಡೆ ಪಾರ್ಲಿಮೆಂಟ್ ಚುನಾವಣೆಗೆ ಹೋದೆ.ರಾಜ್ಯದಲ್ಲಿ ಆರ್ಟಿಕಲ್ 371J ಜಾರಿಗೆ ತಂದವರು ಸಿದ್ದರಾಮಯ್ಯ. ಇಂದು ಅದರ ಉಪಯೋಗವನ್ನ ಸಾವಿರಾರು ಜನರು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಹಲವರು ಜನಪರ ಯೋಜನೆಗಳನ್ನ ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಬರಬೇಕೆಂದು ಐದಾರು ಲೇಖಕರು ಬಂದು ಕೇಳಿಕೊಂಡರು. ಸುಮಾರು 27 ಲೇಖಕರು ಬಂದಿದ್ದರು. ನನ್ನ ಹುಟ್ಟುಹಬ್ಬದ ದಿನ ನಮ್ಮ ನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಹಿನ್ನೆಲೆ ಆಚರಣೆ ಮಾಡಿಕೊಳ್ಳಲು ನಿರಾಕರಿಕೊಂಡೆ.ಇಡಿ ಆಫೀಸ್ ಗೆ ಹೋಗುವಾಗ ಅವರ ಬೆಂಬಲಕ್ಕೆ ನಿಲ್ಲಬೇಕಿದ್ದರಿಂದ ಎಲ್ಲಾ ಕಾರ್ಯಕ್ರಮ ರದ್ದು ಮಾಡಿದೆ.ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ನೀಡಿದ್ದೆ ಹೀಗಾಗಿ ಸರಣಿ ಕಾರ್ಯಕ್ರಮಗಳ ನಡುವೆ ಇಂದು ಆಗಮಿಸಿದ್ದೇನೆ. ಸಿದ್ದರಾಮಯ್ಯ ಅವರನ್ನ ಮೆಚ್ಚಿಸಬೇಕು, ಸಂತೋಷ ಪಡಿಸಬೇಕೆಂದು ಬಂದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಟೀಕೆ ಟಿಪ್ಪಣಿ ಮಾಡುವಂತದ್ದು ಇರುವುದಿಲ್ಲ.ಸಿದ್ದರಾಮಯ್ಯಗೆ ಆಡಳಿತ ಸಿಕ್ಕಾಗ ಅನೇಕ ಒಳ್ಳೆ ಕೆಲಸ ಮಾಡಿದ್ದಾರೆ. ಅನ್ನಭಾಗ್ಯದಂತಹ ಒಳ್ಳೆ ಯೋಜನೆಗೆ ಸಿದ್ದರಾಮಯ್ಯ ಜೊತೆಗೆ ನಮ್ಮ ಕೇಂದ್ರ ಸರ್ಕಾರದ ಕೊಡುಗೆಯೂ ಇದೆ.
ಜನಪರ ಇರುವ ಕಾರ್ಯಕ್ರಮಗಳನ್ನ ಯಾರಿಗೆ ಸಮಾಜದ ಏಳಿಗೆಗೆಗಾಗಿ ಆಸಕ್ತಿ ಇರುತ್ತದೆಯೂ ಅಂತಹ ನಾಯಕರು ಮಾತ್ರ ಮಾಡಲು ಸಾಧ್ಯ. ಹೊಸ ಯೋಜನೆ ಹಾಗೂ ಅಭಿವೃದ್ಧಿ ಪರ ಇರುವುದೇ ಒಳ್ಳೆಯ ಆಡಳಿತ. ಇತರೆ ರಾಜ್ಯಗಳಲ್ಲಿ ಹೋದಾಗ ಸಿದ್ದರಾಮಯ್ಯ ಆಡಳಿತದ ಹಲವರು ಯೋಜನೆಗಳನ್ನ ಹೇಳುತ್ತೇವೆ. ಅನ್ನಭಾಗ್ಯ ಯೋಜನೆ ಬಗ್ಗೆ ಬೇರೆ ರಾಜ್ಯಗಳಲ್ಲೂ ತರಬೇಕೆಂದು ಪ್ರಯತ್ನ ನಡೆಯಿತು. ನಾನು ಹೋರಾಟದೊಂದಿಗೆ ಆರ್ಟಿಕಲ್ 371 ಜೆ ನ್ನು ಪಾಸ್ ಮಾಡಿಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
key words: Former CM-Siddaramaiah – implemented -many -pro-people –schemes-Mallikarjuna Kharge.