ಸಿಡಿ ಪ್ರಕರಣ ನ್ಯಾಯಾಂಗ ತನಿಖೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ…

ಬೆಂಗಳೂರು,ಮಾರ್ಚ್,22,2021(www.justkannada.in): ಸಿಡಿ ಪ್ರಕರಣವನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇಲ್ಲದಿದ್ದರೇ ಇಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.jk

ವಿಧಾನಸಭೆಯಲ್ಲಿ ಸಿಡಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆರು ಸಚಿವರು ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಇವರಿಂದ ಆ ಯುವತಿಗೆ ರಕ್ಷಣೆ ಕೊಡುವ ಕೆಲಸ ಆಗಿಲ್ಲ.ಪ್ರಕರಣ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.  ಯುವತಿ ಗೃಹ ಸಚಿವರಲ್ಲಿ ನನಗೆ ಭಯವಿದೆ.ನ್ಯಾಯಕೊಡಿಸಿ ಎಂಬುದಾಗಿ ಕೋರಿಕೊಂಡಿದ್ದಾರೆ. ಆಕೆಯನ್ನು ಪೊಲೀಸರು ಇದುವರೆಗೆ ಪತ್ತೆ ಹಚ್ಚಿಲ್ಲ. ಆಕೆಗೆ ರಕ್ಷಣೆಯನ್ನು ನೀಡಿಲ್ಲ ಹಾಗಾದ್ರೇ.. ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ, ಸಂತ್ರಸ್ತ ಯುವತಿಗೆ ಒಂದು ನ್ಯಾಯ ನಾ.? ಎಂದು ಕಿಡಿಕಾರಿದರು.

Former CM –Siddaramaiah- judicial probe - CD case
ಕೃಪೆ-internet

ಸಿಡಿ ಮಾಡುವ ಗ್ಯಾಂಗ್ ಇದೆ ಎಂದು ಯತ್ನಾಳ್ ಹೇಳ್ತಾರೆ. ಸಿಎಂಗೆ ಸಿಡಿ  ತೋರಿಸಿ ಬ್ಲಾಕ್ ಮೇಲ್ ಮಾಡ್ತಾರೆ ಎಂದಿದ್ದಾರೆ. ಹೀಗಾಗಿ. ಈ ಪ್ರಕರಣವನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಿಜೆ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಇಲ್ಲದಿದ್ದರೇ ನ್ಯಾಯ ಸಿಗಲ್ಲ ಎಂದರು.

Key words: Former CM –Siddaramaiah- judicial probe – CD case