ತುಮಕೂರು,ಅಕ್ಟೋಬರ್,27,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ಈಡೇರಿಸುವ ನಾಯಕ. ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ತುಮಕೂರಿನ ಶಿರಾದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಂಟಿಬಿ ನಾಗರಾಜ್, ಉಪಚುನಾವಣೆ ಮುಗಿದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕೊಟ್ಟ ಮಾತು ಈಡೇರಿಸುವ ನಾಯಕ ಅಂದ್ರೆ ಅದು ಬಿಎಸ್ ವೈ. ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಕುರ್ಚಿ ಮೇಲೆ ಯಡಿಯೂರಪ್ಪ ಕುಳಿತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆಯ ಮಾತಿಲ್ಲ , ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎಂದರು.
ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಂಟಿಬಿ ನಾಗರಾಜ್, ಮಾಜಿ ಸಿಎಂ ಸಿದ್ಧರಾಮಯ್ಯ ನಮಗೆ ಅನ್ಯಾಯ ಮಾಡಿದ್ದಾರೆ. 25 ವರ್ಷಗಳಿಂದ ಅವರು ಕುರುಬರ ಬೆಂಬಲ ಪಡೆದರು. ಅವರು ಡಿಸಿಎಂ, ಸಿಎಂ ಎಲ್ಲವೂ ಆದರು. ಈಗ ನಮ್ಮಂತವರು ನಮ್ಮ ಜತೆಯಲ್ಲಿರುವವರು ಬೆಳೆಯಬೇಕು. ನನಗೆ ಸಿಎಂ ಆಗುವ ಕನಸು ಇಲ್ಲ ಎಂದು ತಿಳಿಸಿದರು.
Key words: former cm-Siddaramaiah- MLC-MTB Nagaraj – BS yeddyurappa- fulfilling- leader.