ತುಮಕೂರು,ಅಕ್ಟೋಬರ್,23,2020(www.justkannada.in): ನವೆಂಬರ್ 17ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತುಮಕೂರಿನ ಶಿರಾದಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಯಾವುದೇ ಕಾರಣಕ್ಕೂ ಕಾಲೇಜು ಓಪನ್ ಬೇಡ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿ. ಒಂದು ವರ್ಷ ಎಲ್ಲರನ್ನೂ ಪಾಸ್ ಮಾಡಿ. ಪಾಸ್ ಮಾಡಿದ್ರೆ ಜಗತ್ತು ಪ್ರಳಯ ಆಗೋದಿಲ್ಲ ಎಂದು ಸಲಹೆ ನೀಡಿದ್ದಾರೆ.
ಕಾಲೇಜುಗಳ ಆರಂಭ ಇದು ಮೂರ್ಖತನದ ನಿರ್ಧಾರ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಜೀವದ ಜತೆ ಚೆಲ್ಲಾಟ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಲೇಜುಗಳನ್ನು ಪ್ರಾರಂಭಿಸುವುದು ಬೇಡ. ಸಿಎಂ ಬಿಎಸ್ ವೈ, ಸಚಿವರಾದ ಸುರೇಶ್ ಕುಮಾರ್, ಅಶ್ವಥ್ ನಾರಾಯಣ್ ಜತೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
Key words: Former CM -Siddaramaiah -objected – starting- colleges-against- government