ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಹಳಸೋಗಿದೆ: ಇದಕ್ಕೆ ಮೋದಿ ವಾರಕ್ಕೊಮ್ಮೆ ಬರುತ್ತಿದ್ದಾರೆ- ಸಿದ್ಧರಾಮಯ್ಯ ಟೀಕೆ.

ಹಾವೇರಿ,ಜನವರಿ,14,2023(www.justkannada.in) ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಹಳಸೋಗಿದೆ.  ಇದಕ್ಕೆ ಮೋದಿ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.

ಹಾವೇರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ರಾಜ್ಯ ಬಿಜೆಪಿ ನಾಯಕರ ಬಂಡವಾಳವೇ ನರೇಂದ್ರ ಮೋದಿ. ಮೋದಿ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಹಳಸೋಗಿದೆ ಬರಲೇ ಬೇಕಲ್ವಾ..? ಮೋದಿ ಮುಖ ತೋರಸಿ ಮತ ಪಡೆಯಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು.

ತಮ್ಮನ್ನ ತಾವು ಮಾರಿಕೊಂಡು 14 ಶಾಸಕರು ಬಿಜೆಪಿಗೆ ಹೋದರು.  ಹಿರೇಕೆರೂರು ಶಾಸಕ ಕೂಡ ಹೋದರು. ಈಗ  ಒಳ್ಳೆಯ ಪತಿವ್ರತೆ ರೀತಿ ಮಾತನಾಡುತ್ತಿದ್ದಾರೆ. ಜನರ ಮತ ಧಿಕ್ಕರಿಸಿ ಬಿಜೆಪಿಗೆ ಹೋದವರಿಗೆ ನಾಚಿಕೆಯಾಗಬೇಕು.  ಯತ್ನಾಳ್ ಸಹ ಸಿಎಂ ಆಕಾಂಕ್ಷಿಯಾಗಿದ್ದರು.  ಸಿಎಂ ಆಗಬೇಕಾದರೇ  2500 ಕೋಟಿ ರೂ. ಕೊಡಬೇಕು ಅಂದರು. ಭ‍್ರಷ್ಠಾಚಾರದ ಬಗ್ಗೆ ಪ್ರಶ್ನೆ ಮಾಡಿದ್ರೆ  ನಿಮ್ಮಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲವಾ ಅಂತಾರೆ . ಅಂದು ವಿಪಕ್ಷದಲ್ಲಿದ್ದಾಗ ನಿಮ್ಮ ಬಾಯಿಗೆ ಕಡುಬು ಸಿಕ್ಕಿ ಹಾಕಿಕೊಂಡಿತ್ತಾ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಸಿಎಂ ಬೊಮ್ಮಾಯಿ ಅವರು ಮಾತೆತ್ತಿದ್ದರೆ ಧಮ್ ತಾಕತ್ ಬಗ್ಗೆ ಮಾತನಾಡುತ್ತಾರೆ . ಧಮ್ ತಾಕತ್ ಇದ್ದರೆ  40%  ಕಮಿಷನ್ ಬಗ್ಗೆ ತನಿಖೆ ನಡೆಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

 

Key words: former CM-Siddaramaiah-PM-Modi-tour-critisize