ಮೈಸೂರು,ನವೆಂಬರ್,20,2021(www.justkannada.in): ರಾಜ್ಯ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದ್ದು, ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಇನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮೈಸೂರು ಪರಿಷತ್ ಟಿಕೆಟ್ ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದರು.
ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿಗೆ ಪಟ್ಟಿ ರವಾನೆ ಮಾಡಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪ್ರತಿಯೊಬ್ಬರ ಜೊತೆ ಒನ್ ಟು ಒನ್ ಚರ್ಚೆ ಮಾಡಿದರು.
ಸಿದ್ಧರಾಮಯ್ಯ ಅವರ ಜತೆ ಚರ್ಚಿಸಿ ಹೊರಬಂದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಧರ್ಮಸೇನಾ, ನೆನ್ನೆ ನಾಯಕ ಸಭೆ ಮಾಡಲಾಗಿತ್ತು. ನಾನು ಸಿದ್ದರಾಮಯ್ಯ ಜೊತೆ ಮಾತಾನಡಿ ಹೊರಬಂದೆ. ಇಂದು ಅವರು ಆಕಾಂಕ್ಷಿಗಳ ಸಭೆ ಮಾಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಆರು ಬಾರಿ ಟಿಕೆಟ್ ಯಾಕೆ ಕೊಡ್ತೀರ ಅಂತ ಕೆಲವರು ಹೇಳಿದ್ದಾರೆ. ಆದರೆ ಐದು ಬಾರಿಯೂ ನಮ್ಮ ಕುಟುಂಬ ಗೆಲುವನ್ನ ತಂದುಕೊಟ್ಟಿದೆ. ಈ ಮೂಲಕ ಜನ ಒಪ್ಪುದ್ದಾರೆ ಎಂದೂ ನಾನೂ ಹೇಳಿದ್ದೇನೆ. ಸಿದ್ದರಾಮಯ್ಯನವರ ಮನಸ್ಸಲ್ಲಿ ಏನಿದೆ ಅಂತ ಗೊತ್ತಿಲ್ಲ ಎಂದು ನುಡಿದಿದ್ದಾರೆ.
ಟಿಕೆಟ್ ಯಾರಿಗೆ ಕೊಟ್ಟರೂ ಸಂತೋಷ. ನಾನು ನನ್ನ ಅಭಿಪ್ರಾಯ ಮಂಡಿಸಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದೇನೆ. ನಾನು ಸಿದ್ದರಾಮಯ್ಯ ಸಾಹೇಬರಿಗೆ ಹೇಳಿದ್ದೇನೆ. ಹೊಸ ಅಭ್ಯರ್ಥಿ ಮತದಾರರ ಪರಿಚಯ ಮಾಡುವಷ್ಟುರಲ್ಲಿ ಚುನಾವಣೆ ಮುಗಿದು ಹೋಗುತ್ತೆ ಎಂದೂ ಕೆಲವರು ಹೇಳಿದ್ದಾರೆ.. ನಾನು 12 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದು ಧರ್ಮಸೇನಾ ಹೇಳಿದರು.
ಸಿದ್ದರಾಮಯ್ಯ ಮನೆಯಿಂದ ಬೇಸರದಿಂದಲೇ ಹೊರ ನಡೆದ ಟಿಕೆಟ್ ಆಕಾಂಕ್ಷಿ ಡಾ.ಪುಷ್ಪ ಅಮರನಾಥ್.
ಪರಿಷತ್ ಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧವೇ ಟಿಕೆಟ್ ಆಕಾಂಕ್ಷಿ ಪುಷ್ಪ ಅಮರನಾಥ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ಬಳಿಕ ಸಿದ್ದರಾಮಯ್ಯ ಅವರ ಮನೆಯಿಂದ ಪುಷ್ಪ ಅಮರನಾಥ್ ಅವರು ಬೇಸರದಿಂದಲೇ ಹೊರ ನಡೆದಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಕಾರು ಹತ್ತಿ ಪುಷ್ಪ ಅಮರನಾಥ್ ಹೊರಟರು.
Key words: Former CM –Siddaramaiah- talks- with- ticket –aspirants-mysore