ಬಾಗಲಕೋಟೆ,ಅ,23,2019(www.justkannada.in): ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಅಲ್ಲಿನ ನೆರೆ ಸಂತ್ರಸ್ತರ ಸಮಸ್ಯೆಯನ್ನ ಆಲಿಸಿದರು.
ಬಾದಾಮಿ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.ಈ ನಡುವೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯನ್ನ ವೀಕ್ಷಿಸಿದರು. ಹಾಗೆಯೇ ನೆರೆ ಪೀಡಿತ ಪ್ರದೇಶಕ್ಕೆ ತಾವೂ ಭೇಟಿ ನೀಡಿದ್ದರೂ ತಡವಾಗಿ ಬಂದ ತಹಶೀಲ್ದಾರ್ ಗೆ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡರು. ಏಯ್ ಎಲ್ಲಿದ್ದೀಯಾ..?ಏನ್ ಕತ್ತೆ ಕಾಯೋಕೆ ಹೋಗಿದ್ರಾ..? ನನಗಿಂತ ಮೊದಲು ನೀನು ಬರಬೇಕಲ್ವಾ ಎಂದು ತಹಶೀಲ್ದಾರ್ ಗೆ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡರು.
ಗೋವನಕೊಪ್ಪ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಸಿದ್ಧರಾಮಯ್ಯ, ನೆರೆ ನಿರ್ವಹಣೆಯನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ. ತೋರ್ಪಡಿಕೆಗೆ ದೂಪ ಹಾಕಿದಂತೆ ಬಿಜೆಪಿಯವರು ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಜವಾಬ್ದಾರಿ, ನೆರೆ ಸಂತ್ರಸ್ತರ ಪರ ಮಾತನಾಡುವ ಕೆಲಸ ನಮ್ಮದು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಎಂದರು.
ಸದನದಲ್ಲಿ ನಾವು ಪ್ರವಾಹದ ಬಗ್ಗೆ 5 ಗಂಟೆಗಳ ಕಾಲ ಮಾತನಾಡಿದವು. ಆದರೆ ಬಿಜೆಪಿಯವರು 10 ನಿಮಿಷದಲ್ಲಿ ಉತ್ತರ ನೀಡಿದರು. ಅವರಿಗೆ ನೆರೆ ನಿರ್ಹವಣೆ ಬಗ್ಗೆ ಕಾಳಜಿ ಇಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
Key words: Former CM- Siddaramaiah-visit- flood-affected -areas -badami