ಮೈಸೂರು,ಮೇ,27,2019(www.justkannada.in): ಅತೃಪ್ತ ಶಾಸಕರನ್ನ ಸಮಾಧಾನಪಡಿಸಲು ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ರಚನೆಯು ಇಲ್ಲ, ವಿಸ್ತರಣೆಯು ಇಲ್ಲ. ಕೇವಲ ಶಿವಳ್ಳಿಯಿಂದ ತೆರವಾದ ಸ್ಥಾನ ಮಾತ್ರ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿ.ಎಸ್ ಶಿವಳ್ಳಿಯಿಂದ ತೆರವಾದ ಸ್ಥಾನವನ್ನ ಮಾತ್ರ ಭರ್ತಿ ಮಾಡಲು ನಿರ್ಧರಿಸಿದ್ದೇವೆ. ಅದನ್ನ ಹೊರತುಪಡಿಸಿ ಬೇರೆ ಯಾವುದೇ ಪುನರ್ ರಚನೆ ಇಲ್ಲ. ಕಾಂಗ್ರೆಸ್ ನಲ್ಲಿ 1, ಜೆಡಿಎಸ್ನಲ್ಲಿ 2ಸ್ಥಾನ ಭರ್ತಿಯಾಗಬೇಕಿದೆ. ಕಾಂಗ್ರೆಸ್ 1ಸ್ಥಾನ ಭರ್ತಿ ಮಾಡಲಿದೆ, ಜೆಡಿಎಸ್ನದ್ದು ಗೊತ್ತಿಲ್ಲ ಎಂದರು.
ಹಾಗೆಯೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ ಎಂದು ತಿಳಿಸಿದರು.
ಜೂನ್ 1ಕ್ಕೆ ಸರ್ಕಾರ ಬೀಳುತ್ತೆ ಎಂಬ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಮೇಲಿಂದ ಮೇಲೆ ಹೀಗೆ ಹೇಳುತ್ತಲೇ ಇದ್ದಾರೆ. ಜೂನ್ 1ರಂದು ಸರ್ಕಾರ ಬೀಳದೇ ಇದ್ದರೆ ರಾಜೀನಾಮೆ ಕೊಡ್ತಾರಾ ? ಎಂದು ಪ್ರಶ್ನೆ ಮಾಡಿದರು. ಯಡಿಯೂರಪ್ಪ ರಾಜ್ಯ ಸರ್ಕಾರ ಬೀಳುತ್ತೆ ಅಂತ ಒಂದು ವರ್ಷದಿಂದಲೂ ಹೇಳುತ್ತಲೇ ಇದ್ದಾರೆ. ಆದ್ರೆ ಇದುವರೆಗೂ ನಿಜವಾಗಿಲ್ಲ. ಯಡಿಯೂರಪ್ಪ ಸುಮ್ಮನೆ ಹೇಳುತ್ತಲೇ ಇದ್ದಾರೆ. ಒಂದು ವೇಳೆ ಸರ್ಕಾರ ಬೀಳದೇ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೀತಾರಾ ? ಎಂದು ಕಿಡಿಕಾರಿದರು.
Key words: Former CM Siddaramaiah, who clarified cabinet expansion..
#mysore #siddaramaiah #cabinet #expansion..