ಮೈಸೂರು, ಮಾರ್ಚ್ 13, 2022 (www.justkannada.in): ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿಮಿ೯ಸುದು ಬೇಡ. ಅದರ ಬದಲಿಗೆ ಬೆಟ್ಟದ ತಪ್ಪಲಿನಲ್ಲಿ ರಸ್ತೆ ಅಭಿವೃದ್ಧಿಗೊಳಿಸಿ. ರಜೆ ದಿನಗಳಲ್ಲಿ ಸಾವಿರಾರು ಜನರು ಬೆಟ್ಟಕ್ಕೆ ಬರುತ್ತಾರೆ. ವಾಹನ ನಿಲುಗಡೆಗೆ ಪಾಕಿ೯ಗ್ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ರೋಪ್ ವೇ ನಿರ್ಮಾಣಕ್ಕೆ ಚಾಮುಂಡಿ ಬೆಟ್ಟದಲ್ಲಿ ಸುಮಾರು ಭಾಗಗಳಲ್ಲಿ ಹತ್ತು ಅಡಿಗಳಷ್ಟು ಆಳ ತೆಗೆಯಬೇಕು. ಚಾಮುಂಡಿ ಬೆಟ್ಟ ಈಗಾಗಾಲೆ ಕುಸಿತವಾಗಿದೆ. ರೋಪ್ ವೇ ನಿರ್ಮಾಣ ಮಾಡಿದ್ರೆ ಕುಸಿತಕ್ಕೊಳಗಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಅರಣ್ಯ ಸಂಪತ್ತು ಹಾಳು ಮಾಡುವುದು ಬೇಡ. ರೋಪ್ ವೇ ನಿರ್ಮಾಣದಿಂದ ಸಾವಿರಾರ ಮರಗಳ, ಕಾಡು ನಾಶ ಆಗಲಿದೆ. ಪ್ರಾಕೃತಿಕ ಸೌಂದರ್ಯವುಳ್ಳ ಚಾಮುಂಡಿ ಬೆಟ್ಟದ ಹಾಳು ಮಾಡುವುದು ಬೇಡ ಎಂದು ಬಿ. ಎಲ್. ಭೈರಪ್ಪ ಹೇಳಿದ್ದಾರೆ.