ಮೈಸೂರು,ಫೆಬ್ರವರಿ,1,2021(www.justkannada.in): ಜೆಡಿಎಸ್ ರಾಜಕೀಯ ಪಕ್ಷ ಅಲ್ಲ ಎಂದು ಟೀಕಿಸಿದ ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರಿಗೆ ಮೈಸೂರು ಮಾಜಿ ಮೇಯರ್ ರವಿ ಕುಮಾರ್ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರು ಜೆಡಿಎಸ್ ಪಕ್ಷ ರಾಜಕೀಯ ಪಕ್ಷ ಅಲ್ಲ ಅಂತಾರೆ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಜೆಡಿಎಸ್ ಮನೆ ಬಾಗಿಲಿಗೆ ಬಂದಿದ್ದು ನೀವೇ ಅಲ್ಲವೇ..? ಹೀಗಿರುವಾಗ ಜೆಡಿಎಸ್ ಪಕ್ಷ ರಾಜಕೀಯ ಪಕ್ಷವಲ್ಲ ಎನ್ನಲು ನಿಮಗೆ ನೈತಿಕತೆ ಇದೆಯೇ..? ಎಂದು ಮಾಜಿ ಮೇಯರ್ ರವಿ ಕುಮಾರ್ ಪ್ರಶ್ನಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ರವಿಕುಮಾರ್, ಸಮ್ಮಿಶ್ರ ಸರ್ಕಾರದ ವೇಳೆ ಹೆಚ್.ಡಿ ಕುಮಾರಸ್ವಾಮಿ 25 ಸಾವಿರ ಕೋಟಿ ರೂ , ರೈತರ ಸಾಲ ಮನ್ನಾ ಮಾಡಿದ್ದರು. ಇದನ್ನ ನೀವೇ ಹೇಳಿದ್ದೀರಿ. ಸಮ್ಮಿಶ್ರ ಸರ್ಕಾರದ ವೇಳೆ ಹೆಚ್.ಡಿಕೆ ಸಾಲಮನ್ನಾ ಮಾಡಿದ್ದರು ಎಂದು. ಈಗ ಜೆಡಿಎಸ್ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಜಮೀರ್ ಅಹ್ಮದ್ ವಿರುದ್ದ ಕಿಡಿ…
ಹಾಗೆಯೇ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿಕಾರಿದ ಮಾಜಿ ಮೇಯರ್ ರವಿ ಕುಮಾರ್, ಜಮೀರ್ ನೀವು ಈ ಹಿಂದೆ ಏನಾಗಿದ್ದೀರಿ ಎಂಬುದು ನಮಗೆ ಗೊತ್ತು. ನಮ್ಮದು ಜಾತ್ಯಾತೀತ ಪಕ್ಷ. ನೀವು ಈ ಹಿಂದೆ ಉದ್ಯಮದಲ್ಲಿದ್ದವರು. ನಿಮ್ಮನ್ನ ಕರೆತಂದು ಶಾಸಕರನ್ನಾಗಿ, ನಾಯಕರನ್ನಾಗಿ ಮಾಡಿದ್ದು ಹೆಚ್.ಡಿ ದೇವೇಗೌಡರು ಮತ್ತು ಹೆಚ್.ಡಿ ಕುಮಾರಸ್ವಾಮಿ ಅವರು. ಇವರು ಇಲ್ಲ ಅಂದಿದ್ದರೇ ಈಗ ನೀವು ಹೇಗೆ ಇರುತ್ತಿದ್ದೀರಿ ಎಂಬುದ್ದನ್ನು ಊಹಿಸಿಕೊಳ್ಳಿ ಎಂದು ಹರಿಹಾಯ್ದರು.
ಜಾತ್ಯಾತೀತ ತತ್ವ ಒಪ್ಪಿ ಬರುವ ಪಕ್ಷದ ಜೊತೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ...
ಇನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿ ಕುಮಾರ್, ನಮ್ಮದು ಜಾತ್ಯಾತೀತವಾದ ಪಕ್ಷ. ಹೀಗಾಗಿ ಮೈತ್ರಿಗಾಗಿ ನಾವು ಯಾರ ಬಳಿಯೂ ಹೋಗಿ ಕೈಕಟ್ಟಿ ನಿಲ್ಲುವುದಿಲ್ಲ. ಜಾತ್ಯಾತೀತ ತತ್ವವನ್ನ ಒಪ್ಪಿ ಯಾವ ಪಕ್ಷ ಬರುತ್ತದೆಯೂ ಆ ಪಕ್ಷದ ಜತೆ ಕೈ ಜೋಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
Key words: Former mayor – Mysore district- Senior politician-jds- farmer mayor- Ravikumar -Tong