ಮೈಸೂರು,ನವೆಂಬರ್,11,2024 (www.justkannada.in): ಸಿದ್ದರಾಮಯ್ಯ ಅವರಿಗೆ ಮಹಿಷಾ ದಸರಾ ಆಚರಿಸಿದ್ದಕ್ಕೆ ಈ ಸ್ಥಿತಿ ಬಂದಿದೆ ಎಂಬ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರುಷೋತ್ತಮ್, ನಾವು ಮೈಸೂರಿನ ಶೂರನನ್ನು ಪರಿಚಯಿಸಿದ್ದೇವೆ. ಮೌಢ್ಯ ತುಂಬಿ ಮಾತನಾಡುವುದು ಸರಿಯಲ್ಲ. ಭೂಮಿಯ ಸಂಪತ್ತನ್ನು ದೇಶ ವಿದೇಶಕ್ಕೆ ಮಾರುತ್ತಾನೆ. ಹಣದ ಮೂಲಕ ಜನರಿಂದ ಮತ ಹಾಕಿಸಿ ರಾಜ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಜನಾರ್ದನ ರೆಡ್ಡಿ ವಿರುದ್ದ ಕಿಡಿಕಾರಿದರು. ಮಹಿಷಾ ದಸರಾವನ್ನು 10 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಒತ್ತಡ ಇದ್ದರೂ ಸವಾಲನ್ನು ಎದುರಿಸುತ್ತಿದ್ದರೆ. ಅಂತಹವರ ಬಗ್ಗೆ ಮಾತನಾಡುವುದು ಖಂಡನೀಯ ಎಂದರು.
ಹನಕೆರೆಯಲ್ಲಿ ಭೈರವೇಶ್ವರ ಉತ್ಸವದಲ್ಲಿ ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಮಾಡಲಾಗಿದೆ. ಇಲಾಖೆಗಳಲ್ಲಿ ಮೀಟಿಂಗ್ ಮಾಡಿದ್ದರೂ ಶೋಷಣೆ ಮಾಡಿದ್ದಾರೆ. ದೇವಾಲಯಕ್ಕೆ ಹೋಗಲು ಸ್ವಾತಂತ್ರ್ಯವಿಲ್ಲವೇ. ಹಿಂದೂ ಸಂಘಟನೆಯವರು ಯಾಕೆ ಮಾತನಾಡುತ್ತಿಲ್ಲ. ನಿಮಗೆ ಬೇಡವಾದ ಕೆಲಸ ಕಾನೂನಿನಲ್ಲಿ ಅವಕಾಶವಿದ್ದರೂ ನಿಮಗೆ ಅವಕಾಶ ಕೊಡಲ್ಲ. ಮೌಢ್ಯ ಬಿಡಬೇಕಾಗಿದೆ. ಒಳಮೀಸಲಾತಿಯ ವಿಚಾರದಲ್ಲಿ ಎಡ, ಬಲ ಸಂಘರ್ಷ ಹೆಚ್ಚುತ್ತಿದೆ ಇದು ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮರಸ್ಯದಿಂದ ಮುಖಂಡರು ಮಾತನಾಡಿ ಸಹಬಾಳ್ವೆ ನಡೆಸುವುದು ಶ್ರೇಯಸ್ಸು ಎಂದು ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಶ್ರೇಯಸ್ಸು ಸಹಿಸದ ಜನರಿಂದ ಆರೋಪ-ಪ್ರೊ.ಭಗವಾನ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಭಗವಾನ್, ಸಿದ್ದರಾಮಯ್ಯ ಶ್ರೇಯಸ್ಸು ಸಹಿಸದ ಜನರು ಆರೋಪ ಮಾಡುತ್ತಾರೆ. ಆದರೆ ಅದು ಯಾವುದೂ ಸಾಬೀತಾಗಿಲ್ಲ. ಸುಳ್ಳು ಆರೋಪದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಮಹಿಷಾಪುರ ಮೈಸೂರಾಗಿದೆ. ವ್ಯಕ್ತಿ ಕೆಟ್ಟವನಾಗಿದ್ದರೆ ವಾಸ ಮಾಡುವ ನಗರಕ್ಕೆ ಅವನ ಹೆಸರು ಇಡುತ್ತೇವೆಯೇ? ಮಹಿಷಾ ದಸರಾದ ಮೇಲಿನ ಆರೋಪ ಅನಾವಶ್ಯಕ, ಖಂಡನೀಯ ಎಂದು ಪ್ರೊ.ಭಗವಾನ್ ಅಸಮಧಾನ ವ್ಯಕ್ತಪಡಿಸಿದರು.
Key words: Former Mayor, Purushottam, Janardhana Reddy, Mahisha Dasara, CM