ಮೈಸೂರು, ಮೇ 17, 2020 (www.justkannada.in): ವಿಶ್ವ ಆರೋಗ್ಯ ಸಂಸ್ಥೆಯೇ ಮಕ್ಕಳ ಆರೋಗ್ಯ ಮತ್ತು ಸೇಫ್ಟಿ ಮುಖ್ಯ ಎಂದಿದೆ. ಈ ಸಂದರ್ಭದಲ್ಲಿ ಅವಸರದಲ್ಲಿ ಶಾಲೆ ತೆರೆಯೋದು ಸರಿಯಲ್ಲ. ಒಂದು ವೇಳೆ ಶಾಲೆ ತೆರೆಯುವುದಾದರೆ ಪ್ರತಿ ಮಗುವಿನ ಕೋವಿಡ್ ಪರೀಕ್ಷೆ ಆಗಲಿ.
ಮಾರ್ಕ್ ಮಾಡಿ ಮಕ್ಕಳನ್ನು ನಿಲ್ಲಿಸಲು ಆಗಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಒಂದು ಮಗುವಿಗೆ ಸೋಂಕು ಬಂದರೆ ಇಡೀ ಶಾಲೆ, ಮನೆ, ಏರಿಯಾ ತೊಂದರೆ ಆಗುತ್ತೆ. ಬೇಕಿದ್ದರೆ ಜುಲೈಗೆ ಶಾಲೆ ತೆರೆಯೋಣ. ವರ್ಷಕ್ಕೆ 200 ದಿನ ಶಾಲೆ ನಡೆದರೂ ಪರವಾಗಿಲ್ಲ. ಕೊರೊನಾ ಜೊತೆಗೆ ಶಿಕ್ಷಣ ಹೇಗೆ ಎಂಬುದರ ಬಗ್ಗೆ ಬರೆಯುತ್ತಿದ್ದೇನೆ. ಪ್ರಧಾನಮಂತ್ರಿ ಸೇರಿದಂತೆ ಎಲ್ಲಾ ಶಿಕ್ಷಣ ಸಚಿವರಿಗೂ ಪತ್ರ ಬರೆಯುತ್ತಿದ್ದೇನೆ. ಮಾಧ್ಯಮಗಳೂ ಕೂಡ ಮಕ್ಕಳಿಗಾಗಿ ಸಾಕಷ್ಟು ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಶ್ಯೂನ್ಯ ಸಂಪಾದನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಎಚ್ವಿ , ಲಾಕ್ಡೌನ್ ಆಗಿರುವ ಶಾಲೆಗಳನ್ನು ತೆರೆಯಲು ಸೂಕ್ತ ಹೌದ, ಅಲ್ಲವ ಎನ್ನುವ ಚರ್ಚೆ ನಡೆದಿದೆ. ಶಾಲೆ ತೆರೆಯುವ ವಿಚಾರದಲ್ಲಿ ಅವರ ಬೇಡ.
ಆನ್ಲೈನ್ ಪಾಠ ಸಲ್ಲದು. ಈ ಸಂದರ್ಭದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಹೋಗಬಾರದು. ಈಗಾಗಲೇ ಸಾಫ್ಟ್ವೇರ್ ಕಂಪನಿಗಳಿ ಸಿಲಬಸ್ ಮಾಡಲು ರೆಡಿಯಾಗಿವೆ. ಸಾಫ್ಟ್ವೇರ್ ಕಂಪನಿಗಳು ಇದರಲ್ಲಿ ಎಕ್ಸ್ಪರ್ಟ್ ಅಲ್ಲ. ಇದರಿಂದ ಅನಾಹುತ ಆಗಲಿದೆ. ಈಗ ರೆಡಿಯಾಗಿರುವ ಸಾಫ್ಟ್ವೇರ್ ಕಾನ್ಸೆಪ್ಟ್ ಅನಾಹುತ ತರುತ್ತಿದೆ ಎಂದು ತಿಳಿಸಿದ್ದಾರೆ.