‘ಕೈ’ ಶಾಸಕ ಭೈರತಿ ಸುರೇಶ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಬೆಂಗಳೂರು,ಜುಲೈ,16,2022(www.justkannada.in):  ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಅಧಿಕಾರಿಗಳಿಗೆ 30% ಕಮಿಷನ್​ ಕೊಡಬೇಕು. ಶಾಸಕ ಭೈರತಿ ಸುರೇಶ್ ಗೆ ಹಣ ನೀಡಿದರೇ ಮಾತ್ರ ಪೂಜೆಗೆ ಬರುತ್ತಾರೆ  ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, 650 ಕೋಟಿ ರೂ.ಕಾಮಗಾರಿಯಲ್ಲಿ ಕೇವಲ ಶೇ. 40ರಷ್ಟು ಕೆಲಸ ಆಗಿದೆ. ಭ್ರಷ್ಟಾಚಾರ ಇಲ್ಲದೇ ಯಾವುದೇ ಕಾಮಗಾರಿ ಇಲ್ಲಿ ನಡೆಯುತ್ತಿಲ್ಲ. ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.   kat

ಇನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕುಪತ್ರಗಳಲ್ಲಿ ನಕಲಿ ಸಹಿ ಆರೋಪವೂ ಕೇಳಿಬಂದಿದೆ. ನಾನು ಶಾಸಕನಾಗಿದ್ದಾಗ ಬಂದಿರುವ ಹಕ್ಕು ಪತ್ರಗಳಿಗೆ ನಕಲಿ ಸಹಿ ಹಾಕುವ ದಂಧೆ ನಡೆಯುತ್ತಿದೆ. ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ಶಾಸಕ ಭೈರತಿ ಸುರೇಶ್​ ವಿರುದ್ಧ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪ ಮಾಡಿದರು.

Key words: former minister- Katta Subrahmanya Naidu -accused – MLA -Bhairati Suresh – corruption.