ಬೆಂಗಳೂರು,ಮಾರ್ಚ್,15,2024(www.justkannada.in): ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ಪುತ್ರ ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಇದೀಗ ಮತ್ತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ವರಿಷ್ಠರು ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರಗೆ ಪ್ರಾಮುಖ್ಯತೆ ಕೊಡ್ತಾರೆ. ಆದರೆ ಇವರು ಇದನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ವರಿಷ್ಠರು ನನಗೆ ಹೇಳಿದ ತಕ್ಷಣ ನಾನು ನಿವೃತ್ತಿ ಘೋಷಿಸಿದೆ. ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ ಚರ್ಚೆ ಮಾಡೋಣ ಎಂದರು.
ಕ್ಷೇತ್ರದ ಜನರು ನನ್ನ 5 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ನನಗೆ ಯಾವುದೇ ತೊಂದರೆ ಇಲ್ಲ. ಇದೇ ಬಿಎಸ್ ವೈ ನನಗೆ ಭರವಸೆಯನ್ನ ನೀಡಿದ್ದರು. ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದರು. ನಾನು ಕಾಂತೇಶ್ ಇಬ್ಬರು ಯಡಿಯೂರಪ್ಪ ಅವರ ಮನೆಗೆ ಹೋದಾಗ ಬಹಳ ಸ್ಪಷ್ಟವಾಗಿ ಹೇಳಿದ್ದರು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂತೇಶ ನಿಲ್ಲಿಸುತ್ತೇನೆ. ಟಿಕೆಟ್ ಕೊಡಿಸುವುದು ಪಕ್ಕ ಅಂತ ಹೇಳಿದರು. ಆದರೆ ಯಡಿಯೂರಪ್ಪನವರ ಹಾಗೂ ಅವರ ಮಗ ಷಡ್ಯಂತರ ಮಾಡಿ ನನ್ನ ಮಗನಿಗೆ ಲೋಕಸಭಾ ಟಿಕೆಟ್ ಕ್ಷೇತ್ರಕ್ಕೆ ಟಿಕೆಟ್ ತಪ್ಪಿಸಿದ್ದಾರೆ. ಈಗ ಎಎಲ್ ಸಿ ಮಾಡುತ್ತೇನೆ ಎಂದಿದ್ದಾರೆ ನಾನು ನಂಬಲ್ಲ ಎಂದರು.
Key words: former Minister- KS Eshwarappa- former CM- BS Yeddyurappa