ಬೆಂಗಳೂರು,ಸೆಪ್ಟಂಬರ್,2,2023(www.justkannada.in): ವ್ಯಕ್ತಿಯೊಬ್ಬರಿಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್ ಮ್ಯಾನ್ ಟೆಂಡರ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ ಎಂಬುವವರೇ ರಾಜುನಾಯ್ಕ್ ಅವರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಮಾಯಗೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಎಂದು ಹೇಳಿ 30 ಕೋಟಿ ರೂ. ವೆಚ್ಚದ ಟೆಂಡರ್ ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದರು ಎನ್ನಲಾಗಿದೆ.
ಅಡ್ವಾನ್ಸ್ ಆಗಿ 10 ಲಕ್ಷ ರೂಪಾಯಿಯನ್ನ ಗನ್ ಮ್ಯಾನ್ ರಾಘವೇಂದ್ರಗೆ ಹೆಚ್ ರಾಜುನಾಯ್ಕ್ ನೀಡಿದ್ದರು ಎನ್ನಲಾಗಿದೆ. ಆದರೆ ರಾಘವೇಂದ್ರ ಟೆಂಡರ್ ಕೊಡಿಸದೇ ಸತಾಯಿಸಿದ್ದು ಕೊಟ್ಟ 10 ಲಕ್ಷ ರೂ. ಹಣದಲ್ಲಿ 4 ಲಕ್ಷ ಮಾತ್ರ ವಾಪಸ್ ನೀಡಿದ್ದಾರಂತೆ. ಉಳಿದ 6 ಲಕ್ಷ ರೂ. ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ರಾಜುನಾಯ್ಕ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.
Key words: former minister’s -gunman -defrauded – lakhs – rupees- case