ಬಾದಾಮಿ,ಡಿಸೆಂಬರ್,6,2021(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ಬಾದಾಮಿ ಸ್ಪರ್ಧೆಗೆ ಸ್ವಪಕ್ಷದಲ್ಲೇ ಅಪಸ್ವರ ಉಂಟಾಗಿದೆ. ಹೌದು, ಕಳೆದ ಚುನಾವಣೆಯಲ್ಲಿ ಸಿದ್ಧರಾಮಯ್ಯಗೆ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
ಬಾದಾಮಿಯಲ್ಲಿ ನಡೆದ ಪರಿಷತ್ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ಬಿ.ಬಿ ಚಿಮ್ಮನಕಟ್ಟಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಪರಿಷತ್ ಸದಸ್ಯರಾಗಿ ಮಾಡುವುದಾಗಿ ಹೇಳಿದ್ದರು. ಆದರೆ ಪರಿಷತ್ ಸದಸ್ಯರನ್ನಾಗಿ ಮಾಡಿದರಾ? ಈ ಬಗ್ಗೆ ಎಷ್ಟು ನೋವು ಅನುಭವಿಸಿದ್ದೇನೆ ಎಂದು ನನಗೆ ಗೊತ್ತು. ನಾನು ಐದಾರು ಸಲ ಶಾಸಕ ಆಗಿದ್ದೆ. ಮಂತ್ರಿ ಆಗಿದ್ದೆ. ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತರು. ಈಗ ಅವರು ತಮ್ಮೂರು ಇರುವ ವರುಣಾ ಕ್ಷೇತ್ರದಲ್ಲಿ ನಿಲ್ಲಲಿ ಎಂದು ಚಿಮ್ಮನಕಟ್ಟಿ ಹೇಳಿದ್ದಾರೆ.
ವೇದಿಕೆಯಲ್ಲೆ ಅಸಮಾಧಾನ ವ್ಯಕ್ತಪಡಿಸಿದ ಬಿಬಿ ಚಿಮ್ಮನಕಟ್ಟಿ, ನಮ್ಮನ್ನ ಹುಲಿ ಹೋಗಿ ಇಲಿ ಮಾಡಿದ್ದೀರಿ. ಮುಂದಿನ ಸಲ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ನಿಲ್ತಾರೆ. ಸಿದ್ದರಾಮಯ್ಯ ಮಗನ ಬಿಟ್ಟು ತಾವೇ ಸ್ಪರ್ಧಿಸಿದರೆ ಗೆಲ್ಲುತ್ತಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲದಿದ್ರೆ ಅವರು ಯಾಕೆ ಸ್ಪರ್ಧಿಸಬೇಕಿತ್ತು. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಗೆಲ್ಲಬೇಕು ಎಂದು ಚಾಲೆಂಜ್ ಮಾಡಿದ್ದಾರೆ. ಅದನ್ನ ಬಿಟ್ಟು ನಮಗೆ ಗಂಟುಬಿದ್ದರೆ ನಾವೇನು ಮಾಡಬೇಕು ಪ್ರಶ್ನೆ ಮಾಡಿದ್ದಾರೆ.
ಬಿ.ಬಿ. ಚಿಮ್ಮನಕಟ್ಟಿ ಭಾಷಣದಿಂದ ಸಿದ್ದರಾಮಯ್ಯಗೆ ಮುಜುಗರ ಉಂಟಾಯಿತು. ಬಾದಾಮಿಯಿಂದ ಸ್ಪರ್ಧಿಸುವುದಾಗಿ ಬಿ.ಬಿ. ಚಿಮ್ಮನಕಟ್ಟಿ ಹೇಳಿದ್ದಾರೆ. ಬಾದಾಮಿಯಿಂದ ಸ್ಪರ್ಧೆ ಮಾಡಿ ಗೆದ್ದು, ಮಂತ್ರಿಯಾಗುತ್ತೇನೆ ಎಂದು ಪ್ರಚಾರದ ವೇದಿಕೆಯಲ್ಲಿ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ತಿಳಿಸಿದ್ದಾರೆ.
Key words: Former MLA -BB Chimmanakatti -upset –former CM- Siddaramaiah –badami- contest