ಬೆಂಗಳೂರು,ನ,4,2019(www.justkannada.in): ಯಡಿಯೂರಪ್ಪನವರೇ ನಿಮಗೆ ಧಮ್ ಇದ್ಯಾ? ಧಮ್ ಇದ್ರೆ ರಿಸೈನ್ ಮಾಡಿ ಚುನಾವಣೆಗೆ ಬನ್ನಿ. ಸಿದ್ದರಾಮಯ್ಯಗೆ ಯಾಕೆ ಹೇಳ್ತೀರ. ನೀವು ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಸವಾಲು ಹಾಕಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ನಿಮಗೆ ಧಮ್ ಇದ್ರೆ, ತಾಕ್ಕತ್ತಿದ್ರೆ ಬನ್ನಿ. ಆಡಿಯೋದಲ್ಲಿ ಮಾತನಾಡಿರೋದು ಯಾರು? ನಿಮ್ಮ ರಾಷ್ಟ್ರಾಧ್ಯಕ್ಷರ ಬಗ್ಗೆ ನೀವು ಮಾತನಾಡಿಲ್ವಾ? ನಿಮ್ಮ ಕಾರ್ಯಕರ್ತರು ಆಡಿಯೋ ಮಾಡಿ ಬಿಟ್ಟಿಲ್ವಾ?. ಸುಪ್ರೀಂಕೋರ್ಟನ್ನೂ ಮಿಸ್ ಯೂಸ್ ಮಾಡ್ತಿದ್ದೀರಾ. ನಿಮಗೆ ತಾಕತ್ತಿದ್ದರೆ ಸುಪ್ರೀಂನಲ್ಲಿ ವಿಚಾರಣೆಗೊಳಪಡಿಸಿ. ಯಡಿಯೂರು ಸಿದ್ದಲಿಂಗೇಶ್ವರನ ಮುಂದೆ ಪ್ರಮಾಣ ಮಾಡಿ. ಸಿದ್ದಲಿಂಗೇಶ್ವರ ನಿಮ್ಮ ಆರಾಧ್ಯ ದೈವ. ತಾಕತ್ತಿದ್ದರೆ ನೀವು ನಾಳೆ ಅಲ್ಲಿ ಪ್ರಮಾಣ ಮಾಡಿ. ಆಡಿಯೋ ನನ್ನದಲ್ಲ ಅಂತ ಅಲ್ಲಿ ಪ್ರಮಾಣ ಮಾಡಿ ಎಂದು ಸಿಎಂ ಬಿಎಸ್ ವೈಗೆ ಸವಾಲು ಹಾಕಿದರು.
ಬಿಎಸ್ ವೈ ಆಡಿಯೋ ಬಗ್ಗೆ ತನಿಖೆಗೆ ಹೊರಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ತನಿಖೆಗೆ ಮುಂದಾಗಿದ್ದಾರೆ. ಬಿಜೆಪಿಯವರಿಗೆ ಸಾಮೂಹಿಕ ಸನ್ನಿ ಹಿಡಿದಿದೆ. ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದನ್ನ ನೋಡಿದರೆ ಬುದ್ದಿಕಳೆದು ಕೊಂಡಿರುವಂತಿದೆ. ಇವರಿಗೆ ನಿಮ್ಹಾನ್ಸ್ ಟ್ರೀಟ್ ಮೆಂಟ್ ಬೇಕಾಗಿದೆ ಎಂದು ವಿ.ಎಸ್ ಉಗ್ರಪ್ಪ ವ್ಯಂಗ್ಯವಾಡಿದರು.
ಬಿಎಸ್ ವೈ ಎರಡು ತಲೆ ಹಾವಿನಂತೆ…
ಹಾಗೆಯೇ ಬಿಎಸ್ ವೈ ವಿರುದ್ದ ವಾಗ್ದಾಳಿ ಮುಂದುವರೆಸಿದ ವಿ.ಎಸ್ ಉಗ್ರಪ್ಪ, ಯಡಿಯೂರಪ್ಪ ಎರಡು ತಲೆ ಹಾವಿದ್ದಂತೆ. ಆಪರೇಷನ್ ಕಮಲದ ಬಗ್ಗೆ ಅವರೇ ಒಪ್ಪಿದ್ದಾರೆ. ಅಮಿತ್ ಶಾ ಅಣತಿಯಂತೆ ನಡೆದಿದೆ. ಇದನ್ನ ಯಡಿಯೂರಪ್ಪ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಮಾಧ್ಯಮಗಳಲ್ಲೂ ಧ್ವನಿ ನನ್ನದೇ ಅಂದಿದ್ದಾರೆ. ಈಗ ನೋಡಿದರೆ ಉಲ್ಟಾ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಉಡಾಫೆ ಮಾತನಾಡ್ತಾರೆ. ಅನರ್ಹರನ್ನ ರಕ್ಷಣೆ ಮಾಡಬೇಕು ಅಂತ ಹೇಳಿದ್ದಾರೆ. ಸುಪ್ರೀಂಗೆ ಆಡಿಯೋ ಹೋದ್ಮೇಲೆ ಸಂಬಂಧವಿಲ್ಲ ಅಂತಾರೆ. ಅನರ್ಹರು ನಮಗೆ ಗೊತ್ತೇ ಇಲ್ಲ ಅಂತಿದ್ದಾರೆ. ಯಡಿಯೂರಪ್ಪನವರ ಸ್ಥಿತಿ ಬಗ್ಗೆ ಏನ್ ಹೇಳ್ಬೇಕು ಎಂದು ಟೀಕಿಸಿದರು.
ನಿಮ್ಮ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ನಿಮ್ಮನ್ನ ತೆಗೆಯಲೇಬೇಕು ಅಂತ ಹುನ್ನಾರ ನಡೆದಿದೆ. ಸಂತೋಷ್ ಹಿಡಿದು ಎಲ್ಲರೂ ಚಿತಾವಣೆ ಮಾಡ್ತಿದ್ದಾರೆ. ಶೆಟ್ಟರ್, ಪ್ರಹ್ಲಾದ್ ಜೋಶಿಯವರೇ ಕತ್ತಿ ಮಸೆಯುತ್ತಿದ್ದಾರೆ. ಹಿಂದೆ ನಿಮ್ಮನ್ನ ಇಳಿಸಿದವರೇ ಈಗಲೂ ಪ್ರಯತ್ನ ನಡೆಸ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ಆಡಿಯೋ ಬರುವಂತೆ ನೋಡಿಕೊಂಡವರು ಸಿದ್ದು ಎಂಬ ನಳೀನ್ ಕುಮಾರ್ ಕಟೀಲು ಆರೋಪಕ್ಕೆ ತಿರುಗೇಟು ನೀಡಿದ ವಿ.ಎಸ್.ಉಗ್ರಪ್ಪ, ಆ ಸಭೆಯಲ್ಲಿ ಇದ್ದವರೆಲ್ಲಾ ಬಿಜೆಪಿಯವರೇ ಆ ಸಭೆಗೆ ಬೇರೆಯವರಿಗೆ ಅವಕಾಶ ಕೊಡ್ತಾರಾ. ಹೋಗ್ಲಿ ಮಿಡಿಯಾಗಳಿಗಾದ್ರೂ ಅವಕಾಶ ಇತ್ತಾ?. ಇಲ್ಲಾ ಅಲ್ಲಿದ್ದವರೆಲ್ಲ ಬಿಜೆಪಿ ಮುಖಂಡರೇ. ಕಟೀಲು ಅವರೇ ಇದೂ ನಿಮಗೆ ಗೊತ್ತಿಲ್ವಾ? ಅದು ಹೇಗೆ ಆಡಿಯೋ ಬಿಡಸ್ತಾರೆ ಅಂತಾ ಹೇಳ್ತೀರಿ ಎಂದು ಕಿಡಿಕಾರಿದರು.
Key words: former MP-V.S Ugrappa-challenge-cm-BS yeddyurappa