ಬೆಂಗಳೂರು,ಸೆ,6,2019(www.justkannada.in): ಲಕ್ಷ್ಮಣ್ ಸವದಿ, ಪಾಲೇಮಾರ್, ಸಿಸಿ ಪಾಟೀಲ್ ಸದನದಲ್ಲಿಯೇ ಬ್ಲ್ಯೂ ಫಿಲಂ ನೋಡಿದ್ದರು. ಆದರೂ ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಸವದಿಗೆ ಡಿಸಿಎಂ,ಸಿಸಿ ಪಾಟೀಲ್ ಗೆ ಸಚಿವ ಸ್ಥಾನ ನೀಡಲಾಗಿದೆ. ಇಂತವರನ್ನ ಮಾಧುಸ್ವಾಮಿ ಸಮರ್ಥಿಸಿಕೊಳ್ತಾರೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಬ್ಲ್ಯೂ ಫಿಲಂ ನೋಡಿದ್ರೆ ದೇಶದ್ರೋಹವಲ್ಲ ಎಂದಿದ್ದಾರೆ. ನೀಲಿ ಚಿತ್ರ ನೋಡಿದರೆ ಅಪರಾಧವಲ್ಲವಂತೆ. ಹಾಗಾದರೆ ಅಂದು ಅವರ ರಾಜೀನಾಮೆ ಯಾಕೆ ಪಡೆದಿದ್ದು. ಹೋಗ್ಲಿ ನೀಲಿ ಚಿತ್ರಗಳನ್ನ ವಿಧಾನಸೌಧದ ಕಾರಿಡಾರ್ ನಲ್ಲಿ ಯಾವಾಗ ತೋರಿಸ್ತೀರ. ನಿಮಗೆ ನೀಲಚಿತ್ರ ಅಪರಾಧವಲ್ಲ ಅಂದ್ರೆ ಯಾವಾಗ ತೋರಿಸ್ತೀರ. ಬಿಜೆಪಿಯವರಿಗೆ ನೀಲಿ ಚಿತ್ರ ನೋಡುವುದು ಅಸಂಸ್ಕೃತಿಯಲ್ಲ. ಮನೆಮನೆಗೆ ಮದ್ಯ ಸರಬರಾಜು ಮಾಡುವುದು ಅವರಿಗೆ ತಪ್ಪಲ್ಲ. ಮುಂದೆ ಹಾಲಿನಂತೆ ಮನೆಮನೆಗೆ ಮದ್ಯ ಹಾಕ್ತಾರಂತೆ. ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿಯವರ ಧೋರಣೆ ಏನು..? ಕಾನೂನು ಸಂಸದೀಯ ಸಚಿವರೇ ನೀಲಿಚಿತ್ರದ ಬಗ್ಗೆ ಹೇಳಿದ್ದಾರೆ. ಮುಂದೆ ಬಸ್ಟಾಂಡ್,ಇನ್ನಿತರ ಕಡೆ ತೋರಿಸಿದ್ರು ಅಚ್ಚರಿಯಿಲ್ಲ ಎಂದು ಹರಿಹಾಯ್ದರು.
ಸರ್ವ ಪಕ್ಷ ಸಭೆ ಕರೆಯುವಂತೆ ಸರ್ಕಾರಕ್ಕೂ ಮನವಿ ಮಾಡಿದ್ದೆವು. ಆದರೆ ರಾಜ್ಯ ಸರ್ಕಾರವೂ ಕ್ಯಾರೇ ಅಂದಿಲ್ಲ. ರಾಜ್ಯದಲ್ಲಿ ಪ್ರವಾಹಕ್ಕೆ ಸಾಕಷ್ಟು ನಷ್ಟವಾಗಿದೆ. 5 ಸಾವಿರ ಕೋಟಿ ತಕ್ಷಣ ಪರಿಹಾರಕ್ಕೆ ಒತ್ತಡ ಹೇರಿದ್ದೆವು. ಆದರೆ ಕೇಂದ್ರದಿಂದ ಇನ್ನೂ ನೆರವು ಬಂದಿಲ್ಲ. ಪ್ರವಾಹ ಸಂತ್ರಸ್ಥರ ಬಗ್ಗೆ ಇದೇನಾ ಧೋರಣೆ ಎಂದು ರಾಜ್ಯ,ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಸ್ರೋ ಚಂದ್ರ ಗ್ರಹಕ್ಕೆ ವಿಕ್ರಂ ಲ್ಯಾಂಡರ್ ಅನ್ನ ಕಳಿಸಿದೆ. ಇವತ್ತು ಆ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಲ್ಯಾಂಡ್ ಆಗುವುದನ್ನ ನೋಡೋಕೆ ಪ್ರಧಾನಿ ಬರ್ತಿದ್ದಾರೆ. ಇದು ದೇಶಕ್ಕೆ ವಿಶ್ವಮಟ್ಟದಲ್ಲಿ ಗರಿ ಮೂಡಿಸುತ್ತಿದೆ. ನಾವು ಇದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರಧಾನಿ ಭೇಟಿಗೆ ಅವಕಾಶ ಕೋರಿತ್ತು. ಮೊನ್ನೆಯ ದಿನವೇ ನಾವು ಭೇಟಿಗೆ ಪತ್ರ ಬರೆದಿದ್ದೆವು. ಪ್ರವಾಹದ ನೆರವಿನ ಬಗ್ಗೆ ಚರ್ಚೆಗೆ ಅವಕಾಶ ಕೋರಿದ್ದೆವು. ಆದರೆ ಆ ಪತ್ರಕ್ಕೆ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಉಗ್ರಪ್ಪ ಆರೋಪ ಮಾಡಿದರು.
ರಾಜ್ಯಕ್ಕೆ ಹೆಚ್ಚಿನ ಪ್ರವಾಹ ನಷ್ಟಕ್ಕೆ ನೆರವು ಸಿಗಬೇಕು
ರಾಜ್ಯಕ್ಕೆ ಹೆಚ್ಚಿನ ಪ್ರವಾಹ ನಷ್ಟಕ್ಕೆ ನೆರವು ಸಿಗಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಪ್ರಧಾನಿಗೆ ಒತ್ತಡ ಹೇರುವ ಕೆಲಸ ಮಾಡುತ್ತೇವೆ. ಸದನದ ಹೊರಗೆ,ಒಳಗೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನಿರಂತರ ಹೋರಾಟ ಮಾಡಲಿದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಸ್ವಾಭಿಮಾನ ಇರುವವರು ರಿಸೈನ್ ಮಾಡಿ ಹೊರಬಂದಿದ್ದಾರೆ
ದಕ್ಷಿಣ ಕನ್ನಡ ಡಿಸಿ ಶಶಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಎಸ್ ಉಗ್ರಪ್ಪ, ಸುಪ್ರೀಂನ ನಾಲ್ವರು ಜಡ್ಜ್ ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದಿದ್ದರು. ಸುಪ್ರೀಂನ ಹೊರಗೆ ಬಂದು ಹೇಳಿಕೆ ಕೊಟ್ಟಿದ್ದರು. ಈಗ ಅಲ್ಲೊಬ್ಬ ಇಲ್ಲೊಬ್ಬರು ಧ್ವನಿ ಎತ್ತುತ್ತಿದ್ದಾರೆ. ಸ್ವಾಭಿಮಾನ ಇರುವವರು ರಿಸೈನ್ ಮಾಡಿ ಹೊರಬಂದಿದ್ದಾರೆ ಎಂದು ಹೇಳಿದರು.
Key words: former MP- VS Ugrappa-outrage-against – central government.