ಮೈಸೂರು,ನವೆಂಬರ್,19,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಆಯುಕ್ತ ಡಿಬಿ ನಟೇಶ್ ಅವರು ಇಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ.
ಕಾನೂನು ಬಾಹಿರವಾಗಿ ನಿಯಮ ಉಲ್ಲಂಘನೆ ಮಾಡಿ ಸೈಟು ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಮುಡಾದ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಎಸ್ ಪಿ ಟಿಜೆ ಉದೇಶ್ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟುಗಳನ್ನು ನೀಡಿದ್ದು ನಟೇಶ್ ಅವರು. ಇನ್ನು ನಟೇಶ್ ಅವರ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.
‘ಜಸ್ಟ್ ಕನ್ನಡ’ ಜೊತೆ ಸಂದರ್ಶನದಲ್ಲಿ ತಮ್ಮ ಕ್ರಮ ಸಮರ್ಥಸಿಕೊಂಡಿದ್ದ ಡಿಬಿ ನಟೇಶ್
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಸ್ಟ್ ಕನ್ನಡಗೆ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ನೀಡಿದ್ದ ನಟೇಶ್, ಈ ವೇಳೆ ಸಂದರ್ಶನದಲ್ಲಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮವೆಸಗಿಲ್ಲ. ಪಾರ್ವತಿ ಅವರನ್ನ ನಿವೇಶನ ಪಡೆದುಕೊಳ್ಳಲು ಮನವೊಲಿಸಿದ್ದೇ ನಾನು ಎಂದು ಸಮರ್ಥಿಸಿಕೊಂಡಿದ್ದರು. ಒಂದು ವೇಳೆ ಪಾರ್ವತಿ ಅವರು ಮುಡಾ ಮನವಿ ತಿರಸ್ಕರಿಸಿ ನ್ಯಾಯಾಲಯಕ್ಕೆ ಹೋಗಿದ್ದರೇ ಮುಡಾ ಕಟಕಟೆಯಲ್ಲಿ ನಿಲ್ಲಬೇಕಿತ್ತು ಎಂದು ತಮ್ಮ ಕ್ರಮವನ್ನ ಬಲವಾಗಿ ಸಮರ್ಥಿಸಿಕೊಂಡಿದ್ದರು. ಇದೀಗ ಲೋಕಾಯುಕ್ತ ತನಿಖೆಗೆ ದಾಖಲೆ ಸಮೇತ ಹಾಜರಾಗಿರುವ ನಟೇಶ್.
Key words: Former MUDA Commissioner, Natesh, Hearing, Lokayukta, Mysore