ಬೆಂಗಳೂರು,ಅ,22,2019(www.justkannada.in): ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇವೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೆಗೌಡ ಹೇಳಿದರು.
ಬೆಂಗಳೂರು ಜೆಡಿಎಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೆಗೌಡ ಅವರು ಸುದ್ದಿಗೋಷ್ಟಿ ನಡೆಸಿ ಹೇಳಿದ್ದಿಷ್ಟು…
ಪುರಸಭೆ, ನಗರಸಭೆ, ನಗರಪಾಲಿಕೆ ಗಳಿಗೆ ಚುನಾವಣೆಗೆ ಘೋಷಣೆಯಾಗಿದೆ. ಒಟ್ಟು 418, ಸೀಟು ಗಳಿಗೆ ಚುನಾವಣೆಯಾಗಲಿದೆ. ಮಂಗಳೂರಿನಲ್ಲಿ ಒಬ್ಬರು ಮುಸ್ಲಿಂ ಕಾರ್ಪೋರೇಟರ್ ಇದ್ದಾರೆ ಮಂಗಳೂರಿನಲ್ಲಿ ಎಲ್ಲಾ ಕಡೆ ನಾವು ಪ್ರತಿನಿಧಿಸುತ್ತೇವೆ 3-4 ಕಡೆ ನಾವು ಗೆಲ್ಲುವ ಸಾಧ್ಯತೆ ಇದೆ. ಈ ಬಗ್ಗೆ ಫಾರೂಕ್ ಹತ್ರ ಕೂಡ ಚರ್ಚೆ ಮಾಡಿದ್ದೇನೆ. ಮಂಗಳೂರಿನಲ್ಲಿ ನಾನೇ ಹೋಗಿ ಪ್ರಚಾರ ಮಾಡ್ತೇವೆ. ನಾನು ಇಲ್ಲಿ ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯಿತಿ ಖಾಲಿ ಇರುವ ಕಡೆ ಸ್ಪರ್ಧೆ ಮಾಡ್ತೇವೆ. ಬಹುತೇಕ ಎಲ್ಲಾ ಕಡೆ ಸ್ಪರ್ಧೆ ಮಾಡ್ತೇವೆ. ದಾವಣಗೆರೆ ಯಲ್ಲಿ ಸಂಪೂರ್ಣವಾಗಿ ನಮಗೆ ಬಲ ಇದೆ ಎಂದು ಹೇಳೊಲ್ಲ, ಅಲ್ಲಿನ ಮುಖಂಡರು, ಶಿವಶಂಕರ್ ಜೊತೆ ಮಾತನಾಡಿ ಸ್ಪರ್ಧೆ ಮಾಡ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಸ್ವಂತತ್ರವಾಗಿ ಸ್ಪರ್ಧೆ ಮಾಡ್ತೇವೆ.
ಯಾದಗಿರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ. ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ಪೋಲಿಸರು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಅಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ತೇನೆ ನನ್ನ ಕಾರ್ಯಕರ್ತರಲ್ಲಿ ಎಲ್ಲೆ ತೊಂದ್ರೆಯಾದ್ರೆ ನಾನು ಸುಮ್ಮನೆ ಇರೋದಿಲ್ಲ. ಸುಮ್ಮನೆ ಇರೋ ಜಾಯಮಾನ ನನ್ನದು ಅಲ್ಲ.
ಕುಮಾರ ಸ್ವಾಮಿ ಕಾಲದಲ್ಲಿ ನೀಡಿದ್ದ ಅನುದಾನಕ್ಕೆ ಬಿಎಸ್ ವೈ ತಡೆ ನೀಡಿದ್ದರೂ ನಾಗನಗೌಡ ಕಂದಕೂರು ಕ್ಷೇತ್ರದಲ್ಲಿ ಅನುದಾನ ತಡೆಹಿಡಿದಿದ್ದರಿಂದ ಅವರು ಕಾರು ತಡೆದು ಪ್ರತಿಭಟನೆ ನಡೆಸುತ್ತಿದ್ರು, ಅವರ ಮೇಲೆ ಹಲವು ಮೊಕದ್ದಮೆ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತನಿಗೆ ಹಿಂಸೆ ನೀಡುತ್ತಿದ್ದಾರೆ.
ಡಿಸಿಪಿ ಅವರಿಗೆ ಮಾತಾಡ್ದೆ, ಅವರು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದವರನ್ನು ಸಸ್ಪೆಂಡ್ ಮಾಡ್ತೀನಿ ಎಂದು ಹೇಳಿದ್ರು, ಕುಮಾರಸ್ವಾಮಿ ಅವರು ಸಹ ಮಾತನಾಡಿದ್ರು, ಪೋಲಿಸರನ್ನು ಸಸ್ಪೆಂಡ್ ಮಾಡ್ತೀವಿ ಎಂದು ಹೇಳಿದ್ರು,ಆ ನಂತರ ಒತ್ತಡ ಬಂದಿರಬೇಕು, ಹೀಗಾಗಿ ಅವರು ಏನು ಕ್ರಮ ಕೈಗೊಂಡಿಲ್ಲ.ಯಾರ ಒತ್ತಡ ಎಂದು ನಾನು ಹೇಳೊದಿಲ್ಲ. ಹೀಗಾಗಿ ನಾನು ನಾಳೆ ಅಲ್ಲಿ ಹೋಗಿ ನೋಡಿ ಆಮೇಲೆ ಮಾತಾಡ್ತೀನಿ ಎಂದರು.
Key words: former pm-Hd devegowda-jds-bangalore