ಬೆಂಗಳೂರು,ನ,6,2019(www.justkannada.in): ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ. ಮಿತ್ರರೂ ಅಲ್ಲ. ಸಿಎಂ ಬಿಎಸ್ ವೈ ಮತ್ತು ಸಿದ್ಧರಾಮಯ್ಯ ನಮಗೇನು ಆ ಜನ್ಮದ ಶತ್ರುಗಳಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.
ತಮ್ಮ ಮತ್ತು ಸಿಎಂ ಬಿಎಸ್ ವೈ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆ ಕುರಿತು ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಹೆಚ್.ಡಿ ದೇವಗೌಡರು, ಯಡಿಯೂರಪ್ಪ ಏನು ನಮಗೆ ಶತ್ರು ಅಲ್ಲ. ಯಾವ ಸಂಧರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ನಮಗೇನು ಆ ಜನ್ಮ ಶತ್ರುಗಳು ಅಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾತಾಡಿರುತ್ತೇವೆ ಅಷ್ಟೆ. ಸಿದ್ಧರಾಮಯ್ಯ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಒಂದೇ ವೇದಿಕೆಯಲ್ಲಿ ಕುಳಿತಿದ್ದೇವೆ. ಎಲ್ಲರೂ ದೇವರಾಜ್ ಅರಸು ಅಷ್ಟು ಎತ್ತರಕ್ಕೆ ಬೆಳೆಯಬೇಕು,” ಎಂದರು.
ಯಾದಗಿರಿ ಪಿಎಸ್ ಐ ಎತ್ತಂಗಡಿ- ಸಿಎಂ ಬಿಎಸ್ ವೈಗೆ ಮಾಜಿ ಪ್ರಧಾನಿ ಹೆಚ್.ಡಿ ಡಿ ಅಭಿನಂದನೆ…
ಇನ್ನು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್.ಡಿ ದೇವೇಗೌಡರು ಪ್ರತಿಭಟನೆ ಎಚ್ಚರಿಕೆ ನೀಡಿದ ಬೆನ್ನಲ್ಲೆ ಯಾದಗಿರಿ ಪಿಎಸ್ ಐ ಬಾಪುಗೌಡ ವರ್ಗಾವಣೆ ಆದೇಶ ಹೊರಡಿಸಿದ ಸಿಎಂ ಬಿಎಸ್ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪ ವಿಷಯ ತಿಳಿದ ಕೂಡಲೇ ಪಿಎಸ್ ಐ ವಿರುದ್ದ ಕ್ರಮ ತೆಗೆದುಕೊಂಡಿದ್ದಾರೆ. ಇಂತಹ ಘಟನೆಗಳು ಯಾವತ್ತು ಮರುಕಳಿಸಬಾರದು. ತಕ್ಷಣ ಕ್ರಮ ಕೈಗೊಂಡಿದ್ದಕ್ಕೆ ಬಿಎಸ್ ವೈಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಬಿಎಸ್ ವೈರನ್ನ ಹೆದರಿಸಲು ಪ್ರತಿಭಟನೆ ಎಚ್ಚರಿಕೆ ನೀಡಿರಲಿಲ್ಲ. ಘಟನೆ ಬಗ್ಗೆ ಗಮನ ಸೆಳೆಯಲು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ದೌರ್ಜನ್ಯ ಆಗದಂತೆ ನೋಡಿಕೊಳ್ಳಬೇಕು. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು ನಿಜ. ಅತಿವೃಷ್ಟಿಯಿಂದಾಗಿ ಹತ್ತು ಹಲವು ಸಮಸ್ಯೆಗಳಿಂದಾಗಿ, ರಾಜಕೀಯ ಹೋರಾಟ ಇತ್ತು. ಇನ್ನು ಬಿಎಸ್ ವೈ ಗೆ ಫೋನ್ ಮಾಡಿದ್ದು ನಿಜ. ಆದರೆ ರಾಜಕೀಯ ವಿಚಾರ ಮಾತನಾಡಿಲ್ಲ. ಕಡತ ವಿಲೇವಾರಿ ಕುರಿತು ಮಾತನಾಡಿದ್ದೇನೆ ಅಷ್ಟೆ ಎಂದು ಹೆಚ್. ಡಿ ದೇವೇಗೌಡ ಸ್ಪಷ್ಟನೆ ನೀಡಿದರು.
Key words: Former Prime Minister -HD Deve Gowda – both – not – enemies- cm bs yeddyurappa