ಮೈಸೂರು,ಅ,11,2019(www.justkannada.in): ವಿಧಾನ ಮಂಡಲ ಅಧಿವೇಶನಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧ ಹೇರಿರುವುದು ಕೆಟ್ಟ ನಿರ್ಧಾರ. ಈ ಬಗ್ಗೆ ಸ್ಪೀಕರ್ ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನವರಾತ್ರಿಯಲ್ಲಿ ದೇವಿಯ ದರ್ಶನ ಮಾಡಿರಲಿಲ್ಲ. ದಸರಾದಲ್ಲಿ ಜನಜಂಗೂಳಿ ಇತ್ತು.. ಇಂದು ಶುಕ್ರವಾರ ದೇವಿಯ ದರ್ಶನ ಮಾಡಿದ್ದೇನೆ. ರಾಜ್ಯಕ್ಜೆ ಒಳಿತು ಮಾಡಲಿ ಅಂತ ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡರು, ಸರ್ಕಾರದ ಇಂದೊಂದು ಕೆಟ್ಟ ನಿರ್ಧಾರ. ಈ ನಿರ್ಬಂಧ ಮಾಡಬಾರದಿತ್ತು. ಈ ಬಗ್ಗೆ ನಾನು ಕೂಡ ಸರ್ಕಾರ ಸ್ಪೀಕರ್ ಗೆ ಮಾಧ್ಯಮದ ಪರವಾಗಿ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದರು.
ಹಿಂದಿನ ಮೈತ್ರಿ ಸರ್ಕಾರ ರಚನೆಯಾದ ಕುರಿತು ಕಾಂಗ್ರೆಸ್ ಗೆ ಟಾಂಗ್ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮೈತ್ರಿ ಸರ್ಕಾರ ರಚನೆಗೆ ನಾವೇನು ಯಾರ ಮನೆ ಬಾಗಿಲು ತಟ್ಟಿರಲಿಲ್ಲ. ಅವರೆ ನಮ್ಮ ಮನೆಗೆ ಬಂದಿದ್ರು. ನಾನು ಬೇಡ ಎಂದು ಹೇಳಿದ್ದೆ. ಆದರೆ ಅವರು ಕೈ ಹಿಡಿದ್ರು ಒಪ್ಪಿಸಿದ್ರು, ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನಂತರ 14 ತಿಂಗಳು ಸರ್ಕಾರ ನಡೆಯಿತು. ನಾನು ತಂದ ಸ್ಕೀಂ ಒಂದೂ ಬಿಡಬಾರದು ಅಂತ ನಾನು ಹೇಳಿದ್ದೆ. ಇನ್ನು ಮೈತ್ರಿ ಸರ್ಕಾರಕ್ಕೆ ಯಡಿಯೂರಪ್ಪ 24 ಗಂಟೆ ಅಂದ್ರು. ಸಿದ್ದರಾಮಯ್ಯ ನನ್ನ ಕಾರ್ಯಕ್ರಮ ಟಚ್ ಮಾಡಬಾರದು ಅಂದ್ರು. ಇಂತಹ ಸ್ಥಿತಿಯಲ್ಲಿ ಕೊಡಗಿಗೆ ಕೇಂದ್ರ ಸರ್ಕಾರ ಏನೂ ಕೊಡ್ಲಿಲ್ಲ. ಕೇಂದ್ರ ಸರ್ಕಾರ ಕೊಡಗಿಗೆ ಕೇವಲ ೧೦೦ ಕೋಟಿ ಕೊಟ್ರು. ಆದ್ರು ರಾಜ್ಯ ಸರ್ಕಾರ ಎಲ್ಲವನ್ನೂ ನಿಭಾಯಿಸಿತು ಎಂದು ಸಮರ್ಥಿಸಿಕೊಂಡರು.
ವಿಧಾನಸಭೆ ಚುನಾವಣೆಗೂ ಮುನ್ನ ರೈತರ ಸಾಲಮನ್ನಾ ಮಾಡ್ತಿವಿ ಅಂತ ಹೇಳಿದ್ರು. ನಮಗೆ 37 ಸೀಟು ಬಂತು . ನಮ್ಮ ಹಣೆ ಬರಹ. ಆದರೆ ನಮ್ಮ ಹೋರಾಟ ನಿಲ್ಲಲ್ಲ. ಯಡಿಯೂರಪ್ಪ ಸ್ಥಿತಿ ಗೊತ್ತು. ಯಾವುದೇ ರೀತಿ ಯಡಿಯೂರಪ್ಪ ಬಗ್ಗೆ ಕಟುವಾಗಿ ಮಾತನಾಡಲ್ಲ. ನಾನು ವ್ಯಕ್ತಿನಿಷ್ಟೆ ಬಗ್ಗೆ ಮಾತನಾಡಲ್ಲ ಎಂದರು.
ಪ್ರಜ್ವಲ್ ಬರಲ್ಲ, ನಿಖಿಲ್ ಬರಲ್ಲ ಸ್ಥಳೀಯರಿಗೆ ಟಿಕೆಟ್…
ಹುಣಸೂರು ವಿಧನಾಸಭಾ ಕ್ಷೇತ್ರದಲ್ಲಿ ಉಪಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಉಪಚುನಾವಣೆಯಲ್ಲಿ ಪ್ರಜ್ವಲ್ ಬರಲ್ಲ, ನಿಖಿಲ್ ಬರಲ್ಲ ಸ್ಥಳೀಯರಿಗೆ ಟಿಕೆಟ್ ಕೊಡೋದು ಎಂದು ಸ್ಪಷ್ಟನೆ ನೀಡಿದರು.
ಬೈ ಎಲೆಕ್ಷನ್ ಸರ್ಕಾರದ ಆಯಸ್ಸು ನಿಗದಿ ವಿಚಾರ. ನಾರಾಯಣಗೌಡರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ ಎಂದು ನಾರಾಯಣಗೌಡರ ಹೆಸರು ಹೇಳುತ್ತಿದಂತೆ ದೇವೇಗೌಡರು ಕೈಮುಗಿದ ಘಟನೆ ನಡೆಯಿತು.
Key words: Former Prime Minister- HD Deve Gowda- visit-chamundi hills-mysore