ಬೆಂಗಳೂರು,19,2019(www.justkannada.in): ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ರಾಜಭವನಕ್ಕೆ ಮನವಿ ಸಲ್ಲಿಸಲು ಬಂದಿದ್ದ ವೇಳೆ ರಾಜ್ಯಪಾಲರು ನಡೆದುಕೊಂಡ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದ ರೈತ ಮುಖಂಡರು ರಾಜ್ಯಪಾಲರ ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ನಂತರ ರಾಜಭವನಕ್ಕೆ ತೆರಳಲು ಅವಕಾಶ ಸಿಕ್ಕರೂ ರಾಜ್ಯಪಾಲರ ಭೇಟಿ ಮಾಡಿಲೂ ರೈತ ಹೋರಾಟಗಾರರಿಗೆ ಆಗಲಿಲ್ಲ. ಅಲ್ಲಿನ ವಿಶೇಷ ಕರ್ತವ್ಯ ಅಧಿಕಾರಿಗೆ ಮಹದಾಯಿ ಹೋರಾಟಗಾರರು ಮನವಿ ಸಲ್ಲಿಸಿ ವಾಪಸ್ ಬಂದಿದ್ದರು.
ಮಹದಾಯಿ ಹೋರಾಟಕ್ಕೆ ನೈತಿಕ ಬೆಂಬಲ ನೀಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಜನರ ತೆರಿಗೆ ಹಣದಿಂದ ರಾಜಭವನ ಇರೋದು. ಅಲ್ಲಿನ ವ್ಯವಸ್ಥೆ ತೆರಿಗೆ ದುಡ್ಡಿನಿಂದ ನಡೆಯುತ್ತಿದೆ. ಭೇಟಿ ಮಾಡಲು ಬಂದಿದ್ದ ಮಹದಾಯಿ ಹೋರಾಟಗಾರರು ಏನು ಟೆರರಿಸ್ಟ್ ಗಳಾ..? ಅಥವಾ ಬಾಂಬ್ ಇಡ್ಕೊಂಡು ಬಂದಿದ್ದರಾ..? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Key words: former speaker-Ramesh Kumar –support- mahadayi fighter