ನವದೆಹಲಿ,ಫೆಬ್ರವರಿ,26,2021(www.justkannada.in): ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಭಾರತದ ಚುನಾವಣಾ ಆಯೋಗವು ದಿನಾಂಕಗಳನ್ನು ಇಂದು ಪ್ರಕಟಿಸಿದೆ.
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ, ಪುದುಚೇರಿ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ ಚುನಾವಣಾ ದಿನಾಂಕಗಳನ್ನು ಪ್ರಕಟ ಮಾಡಿದೆ. ಮಾರ್ಚ್ 27ರಂದು ಮತದಾನ ಪ್ರಾರಂಭವಾಗಲಿದ್ದು, ಮೇ 2ರಂದು ಪಂಚ ರಾಜ್ಯಗಳ ಚುನಾವಣೆಗೆ ಮತಏಣಿಕೆ ಕಾರ್ಯ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಈ ಬಾರಿ ಕೊರೋನಾ ಸೋಂಕಿನ ಕಾರಣದಿಂದಾಗಿ ಹಿರಿಯ ನಾಗರೀಕರಿಗೆ ಅಂಚೆ ಮತದಾನದ ಮೂಲಕ, ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಶೇ.30ಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ. ನಾಮಪತ್ರದ ವೇಳೆಯಲ್ಲಿ ಅಭ್ಯರ್ಥಿಗಳ ಜೊತೆಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಾಮಪತ್ರ ಸಲ್ಲಿಸಲು ಎರಡು ವಾಹನಗಳಲ್ಲಿ ಮಾತ್ರವೇ ಬರಲು ಅವಕಾಶ ನೀಡಲಾಗುತ್ತಿದೆ. ಕೊರೋನಾ ರೋಗಿಗಗಳಿ, ಶಂಕಿತರಿಗೆ ಪ್ರತ್ಯೇಕವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಭದ್ರತೆಯ ಕಾರಣಕ್ಕೂ ಹೆಚ್ಚುವ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳ ಬಳಿ ಸಿಆರ್ ಫಿಎಪ್ ಸಿಬ್ಬಂದಿಗಳನ್ನು ಭದ್ರತೆಗಳಿಗಾಗಿ ನಿಯೋಜಿಸಲಾಗುತ್ತಿದೆ ಎಂದರು.
ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಲು ಅಭ್ಯರ್ಥಿಗಳು 5 ವಾಹನಗಳನ್ನು ಮಾತ್ರವೇ ಬಳಸೋದಕ್ಕೆ ಅವಕಾಶ ನೀಡಲಾಗಿದೆ. ಮನೆ ಮನೆ ಪ್ರಚಾರ ನಡೆಸಲು 5 ಜನರಿಗಷ್ಟೇ ಅಭ್ಯರ್ಥಿಗಳೊಂದಿಗೆ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ ಎಂದರು.
824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಈ ಚುನಾವಣೆಯಲ್ಲಿ 18.68 ಕೋಟಿ ಮತದಾರರು ಭಾಗವಹಿಸಲಿದ್ದಾರೆ. ಒಟ್ಟು 2.7 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂ – 126, ತಮಿಳುನಾಡು – 234, ಪಶ್ಚಿಮ ಬಂಗಾಳ – 294, ಕೇರಳ -140 ಹಾಗೂ ಕೇಂದ್ರಾಡಳಿತ ಪ್ರದೇಶವಾದಂತ ಪುದುಚೇರಿ- 30 ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ ಎಂದರು.
ಐದು ರಾಜ್ಯಗಳ ಚುನಾವಣೆ ದಿನಾಂಕ ಹೀಗಿದೆ ನೋಡಿ
ಅಸ್ಸಾಂ: ಮೂರು ಹಂತದಲ್ಲಿ ಮತದಾನ
ಮಾರ್ಚ್ 2 ರಿಂದ ಅಧಿಸೂಚನೆ. ಮಾರ್ಚ್ 27 ಮೊದಲ ಹಂತದ ಮತದಾನ. ಏಪ್ರಿಲ್ 1 ರಂದು 2ನೇ ಹಂತದ ಮತದಾನ, ಏಪ್ರಿಲ್ 6ರಂದು 3ನೇ ಹಂತದ ಮತದಾನ.
ಕೇರಳ: ಒಂದೇ ಹಂತದಲ್ಲಿ ಮತದಾನ…
ಕೇರಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ. ಕೇರಳಾದಲ್ಲಿ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಏಪ್ರಿಲ್ 6 ರಂದು ಮತದಾನ.
ಪುದುಚೇರಿ ವಿಧಾನಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ:
ತಮಿಳುನಾಡು: ಒಂದೇ ಹಂತದಲ್ಲಿ ಮತದಾನ:
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಮತದಾನ.
ಪಶ್ಚಿಮ ಬಂಗಾಳ : 8 ಹಂತಗಳಲ್ಲಿ ಮತದಾನ
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿ 8 ಹಂತದಲ್ಲಿ ಮತದಾನ. ಮಾರ್ಚ್ 27ರಂದು ಮೊದಲ ಹಂತದ ಮತದಾನ, ಏಪ್ರಿಲ್ 1 ರಂದು 2ನೇ ಹಂತ, ಏಪ್ರಿಲ್ 6ರಂದು 3ನೇ ಹಂತ, ಏಪ್ರಿಲ್ 10 ರಂದು 4ನೇ ಹಂತದ ಮತದಾನ, ಏಪ್ರಿಲ್ 17 ರಂದು 5ನೇ ಹಂತ, ಏಪ್ರಿಲ್ 22, 6ನೇ ಹಂತ , ಏಪ್ರಿಲ್ 26 ರಂದು 7ನೇ ಹಂತ, ಏ.28 ರಂದು 8ನೇ ಹಂತದ ಮತದಾನ.
ಮೇ.2ರಂದು ಮತಏಣಿಕೆ ನಡೆಯಲಿದೆ.
Key words: Four states -announced – dates – assembly elections.