ಬೆಂಗಳೂರು,ಜನವರಿ,13,2025 (www.justkannada.in): ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿದ್ದ 7 ಆರೋಪಿಗಳನ್ನು ಬೆಂಗಳೂರಿನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಥಾಮಸ್, ಜೋಸ್ ಕರುವಿಲ್ಲ, ಹಾಫರ್ ಸಾಧಿಕ್, ಜೀನ್ ಕಮಲ್, ವಿಜಯ್ ಚಿಂಪ್ಲಕರ್ ಅಮಿತ್ ಅಲಿಯಾಸ್ ದೀಪಕ್, ಊರ್ವಶಿ ಬಂಧಿತ ಆರೋಪಿಗಳು. ಬಂಧಿತ 7 ಆರೋಪಿಗಳು ಎಂಇಡಿಸಿ ಎಂಬ ನಕಲಿ ಕಂಪನಿ ಹೆಸರೇಳಿ ಹಣ ದೋಚಿದ್ದರು ಎನ್ನಲಾಗಿದೆ.
ಮಲೇಷ್ಯಾ ಡೆವಲಪ್ ಮೆಂಟ್ ಬ್ಯಾಂಕ್ ಎಂದು ಆರೋಪಿಗಳು ನಗರತ್ ಪೇಟೆಯಲ್ಲಿ ಕಚೇರಿ ತೆರೆದಿದ್ದರು. ಈ ಮಧ್ಯೆ ಹಣ ನೀಡಿದರೇ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ PWD ಕಾಂಟ್ರ್ಯಾಕ್ಟರ್ ಜೆ ನವೀನ್ ಎಂಬುವವರಿಗೆ ವಂಚನೆ ಮಾಡಿದ್ದಾರೆ. ನವೀನ್ ಬಳಿ ಎರಡು ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. ಪ್ರಾರಂಭದಲ್ಲಿ 1 ಲಕ್ಷ ಹಣವನ್ನು ಆರ್ ಟಿಜಿಎಸ್ ಮಾಡಿಸಿಕೊಂಡಿದ್ದರು. ಬೇರೆ ಕಚೇರಿಯಲ್ಲಿ ಹಣ ಇಡುವುದಾಗಿ ಹೇಳಿದ್ದ ಆರೋಪಿಗಳು ನಂತರ ಪತ್ತೆಯೇ ಇಲ್ಲ
ತಾನು ಮೋಸ ವಿಚಾರ ತಿಳಿದ ನವೀನ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಇದೀಗ 7 ಆರೋಪಿಗಳನ್ನ ಖಾಕಿ ಪಡೆ ಬಂಧಿಸಿದೆ.
Key words: Fraud, double money, 7 accused, arrested