ಬೆಂಗಳೂರು,ಮೇ,6,2021(www.justkannada.in): ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಎ. ಹರಿ ನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಬಂಧಿತ ಪ್ರಮುಖ ಆರೋಪಿ. ಕೇರಳದ ಹರಿ, ತನ್ನದೇ ರಾಜ್ಯದ ರಂಜಿತ್ ಪಣಿಕ್ಕರ್ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿದ್ದ. ಆತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 8.75 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಆರೋಪಿಗಳು ಬೆಂಗಳೂರಿನ ಬಿಸ್‌ನೆಸ್ ಮನ್ ಆದ ವೆಂಕಟರಮಣಿ ಶಾಸ್ತ್ರಿ ಎಂಬುವರಿಗೆ 360 ಕೋಟಿ ರೂ.ಗಳ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಶೇ.6% ಬಡ್ಡಿಯಂತೆ ಲೋನ್ ಕೊಡಿಸುವುದಾಗಿ ನಂಬಿಸಿದ್ದರು. ಕೇರಳದ ಪಂಚತಾರ ಹೋಟೆಲ್ ಗಳಿಗೆ ಕರೆಯಿಸಿ ಮೀಟಿಂಗ್ ಮಾಡಿ ಪುಸಲಾಯಿಸಿ, ಲೋನ್ ಮಂಜೂರಾಗಿರುವ ಬಗ್ಗೆ 360 ಕೋಟಿ ರೂ.ಗಳ ನಕಲಿ ಡಿ.ಡಿ. ತೋರಿಸಿ, ಸದರಿ ಡಿ.ಡಿ ನೀಡಬೇಕಾದಲ್ಲಿ ಲೋನ್ ಸರ್ವೀಸ್ ಚಾರ್ಜ್ ಆಗಿ ಲೋನ್ ಮೊತ್ತದ ಶೇ.2% ಹಣ ನೀಡುವಂತೆ ಒತ್ತಾಯ ಮಾಡಿದ್ದರು.
ಈ ನಡುವೆ ಒಟ್ಟು 7,20 ಕೋಟಿ ರೂ ಹಣವನ್ನು ಎ.ಹರಿ ನಾಡರ್ ಹರಿ ಗೋಪಾಲಕೃಷ್ಣ ನಾಡರ್ ಬೆಂಗಳೂರಿನ ಬಿಸ್‌ನೆಸ್‌ಮನ್ ಅವರ ಕಂಪನಿ ಆಕೌಂಟ್ ನಿಂದ ವರ್ಗಾವಣೆ ಪಡೆದು ಲೋನ್ ಕೊಡಿಸದೆ, ಪಡೆದುಕೊಂಡಿದ್ದ 7.20 ಕೋಟಿ ರೂ. ಹಣವನ್ನು ಕೊಡದೆ ಮೋಸ ಮಾಡಿದ್ದನು. ಜತೆಗೆ ಹಣ ಕೇಳಿದ್ದಕ್ಕೆ ಪ್ರಾಣ ಬೆದರಿಕೆಯನ್ನು ಹಾಕಿದ್ದನು. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರಕರಣ ಸಂಬಂಧ ಸಿಸಿಬಿ ವಿಶೇಷ ತಂಡ ಪ್ರಕರಣದ ಪ್ರಮುಖ ಆರೋಪಿ ಎ.ಹರಿ ನಾಡರ್ ಆ ಹರಿ ಗೋಪಾಲಕೃಷ್ಣ ನಾಡರ್, ತಿರುನಲ್ ವೇಲಿ ಜಿಲ್ಲೆ, ತಮಿಳುನಾಡು ಎಂಬಾತನನ್ನು ಕೇರಳ ಕೋವಲಂ ನಲ್ಲಿ ವಶಕ್ಕೆ ಪಡೆದು ಆರೋಪಿಯಿಂದ ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ 3,893 ಗ್ರಾಂ ತೂಕದ ಚಿನ್ನಾಭರಣಗಳು, 8.76.916 ರೂ. ನಗದು ಹಣ ಹಾಗು ಇನೋವಾ ಕ್ರಿಸ್ಟ ಕಾರ್ ನಂ. ಟಿ.ಎನ್-12 ಎಕ್ಸ್ 0001 ಅನ್ನು ವಶಕ್ಕೆ ಪಡೆದಿದ್ದಾರೆ.
Key words: Fraud – believing – low interest -rate –loan-CCB-arrest – accused.