ಬಾರ್ ಅಂಡ್ ರೆಸ್ಟೋರೆಂಟ್ ಗೆ 6.70 ಲಕ್ಷ ರೂ ಉಂಡೆನಾಮ: ಕ್ಯಾಷಿಯರ್ ವಿರುದ್ದ ಕೇಸ್ ದಾಖಲು

ಮೈಸೂರು,ಫೆಬ್ರವರಿ,26,2025 (www.justkannada.in): ಬ್ಯಾಂಕ್ ಗೆ ಕಟ್ಟಬೇಕಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಗೆ ಸೇರಿದ್ದ 6.70 ಲಕ್ಷ ರೂ ಹಣವನ್ನ ಹೊತ್ತೋಯ್ದ ಕ್ಯಾಷಿಯರ್ ವಿರುದ್ದ ಮೈಊರು ಜಿಲ್ಲೆಯ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಜಿಲ್ಲೆಯ  ಗಡಿಭಾಗದಲ್ಲಿರುವ ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.

ಹಲವು ತಿಂಗಳಿಂದ ಮಹದೇವ್ ನಂಜನಗೂಡು  ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ ಪಡೆದು ತೆರಳಿದ್ದಾಗ ವ್ಯಾಪಾರ ವಹಿವಾಟಿನಲ್ಲಿ ಬಂದ ಹಣವನ್ನ ಬ್ಯಾಂಕ್ ಗೆ ಕಟ್ಟುವಂತೆ ಮಹದೇವ್ ಗೆ ತಿಳಿಸಿ ತೆರಳಿದ್ದರು.

ರಜೆ ಮುಗಿಸಿ ವಾಪಸ್ ಬಂದಾಗ ವ್ಯಾಪಾರವಾಗಿ ಸಂಗ್ರಹವಾಗಿದ್ದ 6.70 ಲಕ್ಷ ಹಣ ಕ್ಯಾಶಿಯರ್ ಮಹದೇವ್ ಕಟ್ಟದೆ ಕೆಲಸಕ್ಕೂ ಬಾರದೆ ನಾಪತ್ತೆಯಾಗಿದ್ದನು. ಮಹದೇವ್ ನನ್ನ ಪತ್ತೆ ಹಚ್ಚಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಸಮಯಾವಕಾಶ ಪಡೆದಿದ್ದರು. ಹಣ ಹಿಂದಿರುಗಿಸದ ಹಿನ್ನಲೆ ಆನಂದ್ ಅವರು ಮಹದೇವ್ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Key words: 6.70 lakhs, bar and restaurant, case, against, cashier