ಮೈಸೂರು,ಮಾರ್ಚ್,15,2021(www.justkannada.in): ಆರ್ ಬಿಐ ನೌಕರರನೆಂದು ನಂಬಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್ ವಂಚಕರನ್ನ ನಗರದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಗರದ ಹೆಬ್ಬಾಳಿನ ನಿವಾಸಿ ಮಂಜು (30), ಶ್ರೀರಾಂಪುರ ನಿವಾಸಿ ಶಂಕರ್ (42) ಬಂಧಿತ ಆರೋಪಿಗಳು. ಆರೋಪಿ ಮಂಜು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಹಾಗೂ ಇನ್ನೋರ್ವ ಆರೋಪಿ ಶಂಕರ್ ರಿಟೈರ್ಡ್ ಕಂಡಕ್ಟರ್ ಆಗಿದ್ದ.
ಇನ್ನು ಇಬ್ಬರು ಆರೋಪಿಗಳು ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ಹಣ ವಸೂಲಿ ಮಾಡಿದ್ದರು. ವಂಚನೆಯಿಂದ ಬಂದ ಹಣದಿಂದ ಇಬ್ಬರು ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರಕರಣ ಕುರಿತು ನಗರದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಆರ್ ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆ ಬಳಿ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದರು. ಇನ್ನು ಆರೋಪಿಗಳ ಬಳಿಯಿದ್ದ ಆರ್ಬಿಐ ನ ನಕಲಿ ದಾಖಲಾತಿಗಳು, ದಾಖಲಾತಿ ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್ಟಾಪ್, ಪ್ರಿಂಟರ್ಸ್, 25 ಆರ್ಬಿಐ ನ ನಕಲಿ ಬಾಂಡ್ ಪೇಪರ್ ಗಳು, 2 ಸೀಲುಗಳನ್ನ ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಂಜು ಮಾರುತಿ ಸುಜುಕಿ ಬಲೇನೋ, ಮಹೇಂದ್ರ ಎಕ್ಸ್ಯುವಿ 500, ಬಿಎಂಡ್ಲ್ಯೂ ನಂತಹ ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದನು ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ವಿ. ಎಸ್. ಶಶಿಕುಮಾರ್ ಮತ್ತು ಜಗದೀಶ್, ಎಎಸ್ಐ ಗಳಾದ ಸುಭಾಷ್ ಚಂದ್ರ, ಡಿ. ಜಿ. ಚಂದ್ರೇಗೌಡ, ಅಸ್ಗರ್ ಖಾನ್, ಹಿರಣ್ಣಯ್ಯ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.
Key words: Fraud – public -believing – RBI –employee-two –arrest-mysore