ಮಂಗಳೂರು,ಮಾರ್ಚ್,29,2021(www.justkannada.in): ವಿಸಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ರಾಮಸೇನೆ ಸಂಸ್ಥಾಪಕನನ್ನ ಮಂಗಳೂರಿನ ಕಂಕನಾಡಿ ಟೌನ್ ಪೊಲೀಸರು ಬಂಧಿಸಿದ್ದಾರೆ.
ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ(41) ಬಂಧಿತ ಆರೋಪಿ. ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿಯ ಪ್ರೊಫೆಸರ್ ಗೆ ನಂಬಿಸಿ ಪ್ರಸಾದ್ ಅತ್ತಾವರ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
ಈ ನಡುವೆ ಪ್ರೊಫೆಸರ್ ರಿಂದ 17 ಲಕ್ಷ ಹಣವನ್ನ ಪಡೆದಿದ್ದ ಪ್ರಸಾದ್ ಅತ್ತಾವರ ಗಣ್ಯವ್ಯಕ್ತಿಗಳ ಜತೆ ಫೋಟೊ ತೋರಿಸಿ ವಂಚನೆ ಮಾಡಿದ್ದನು. ಈ ನಡುವೆ ಹಣ ವಾಪಸ್ ಕೇಳಿದ್ದಕ್ಕೆ ಹಣ ನೀಡದೆ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಈ ಸಂಬಂಧ ವಿವೇ ಆಚಾರ್ಯ ಎಂಬುವವರ ದೂರಿನ ಮೇರೆಗೆ ಕಂಕನಾಡಿ ಟೌನ್ ಪೊಲೀಸರು ಪ್ರಸಾದ್ ಅತ್ತಾವರ್ ಬಂಧಿಸಿದ್ದಾರೆ.
Key words: Fraud -VC –post- Arrest -Ramasena founder-mangalore