ಬೆಂಗಳೂರು, ಅಕ್ಟೋಬರ್ 26, 2021 (www.justkannada.in): ನಟಿ ತಮನ್ನಾ ಅವರಿಗೆ ಮೋಸ ಆಗಿದೆ. ಇದರ ವಿರುದ್ಧ ನಟಿ ಸಮರ ಸಾರಲು ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರಂತೆ ಮಿಲ್ಕಿ ಬ್ಯೂಟಿ!
ಹೌದು. ಸಂಭಾವನೆ ವಿಷಯದಲ್ಲಿ ತಮನ್ನಾಗೆ ವಂಚನೆಯಾಗಿದೆ. ತೆಲುಗಿನ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್ ಶೆಫ್’ ಅಡುಗೆ ಶೋವನ್ನು ತಮನ್ನಾ ನಡೆಸಿಕೊಡುತ್ತಿದ್ದರು.
ಈ ಶೋ ನಿರೂಪಣೆಗೆ ತಮನ್ನಾ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟಿಗೆ ಸರಿಯಾಗಿ ಸಂಭಾವನೆ ನೀಡದೆ ವಂಚಿಸಲಾಗಿದೆಯಂತೆ.
ತಮಗಾಗಿರುವ ಮೋಸದ ವಿರುದ್ಧ ತಮನ್ನಾ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರಂತೆ.