ಮೈಸೂರು,ಮೇ,24,2023(www.justkannada.in): ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಆಮೇರಿಕಾ ಹಾಗೂ ಡಾ.ಗೋವಿಂದರಾಜು, ಸುಬ್ರಮಣಿ ಹಾರ್ಟ್ ಫೌಂಡೇಷನ್, ವಿಸ್ಕಿನ್ ಸನ್ , ಆಮೇರಿಕಾರವರ ಸಹಯೋಗದೊಂದಿಗೆ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜೂನ್ 12ರಿಂದ ಜೂನ್ 18ರವರೆಗೆ ನಡೆಯುವ ಈ ಕಾರ್ಯಗಾರದಲ್ಲಿ 200 ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಮಾಡಲಾಗುತ್ತದೆ.
ಜೂನ್ 12ರಿಂದ ಜೂನ್ 14ರವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ, ಜೂ. 15 ಮತ್ತು16ರಂದು ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹಾಗೂ ಜೂನ್ 17 ಮತ್ತು 18ರಂದು ಕಲಬುರುಗಿಯ ಜಯದೇವ ಆಸ್ಪತ್ರೆಯಲ್ಲಿ ಈ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಯಲಿದೆ.
ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ ಅವರ ಪ್ರಕಾರ ಈ ಕಾರ್ಯಗಾರದಲ್ಲಿ 200 ಜನ ಬಡರೋಗಿಗಳ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗಾಗಿ ಆಯೋಜಿಸಲಾಗಿದೆ. ಪ್ರತಿ ರೋಗಿಗೂ ಉನ್ನತ ಗುಣಮಟ್ಟದ ಮೆಡಿಕೇಟೆಡ್, ಸ್ಟಂಟ್ ಗಳನ್ನು ಉಚಿತವಾಗಿ ಅಳವಡಿಸಲಾಗುವುದು, ಈ ಸೌಲಭ್ಯವನ್ನು ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದಾಗಿದೆ. ಅವಶ್ಯಕ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು,
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು 8ನೇ ಜೂನ್ ರೊಳಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಸಮಯ : ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.30 ವರೆಗೆ
ದಾಖಲಾತಿಗಾಗಿ ದಯವಿಟ್ಟು ಸ೦ಪರ್ಕಿಸಿ. :
ನಿರ್ದೇಶಕರ ಕಛೇರಿ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು – 560 069.
ಬೆಂಗಳೂರು ಕಚೇರಿ ದೂರವಾಣಿ ಸಂಖ್ಯೆ: 9480827888 ಆಥವಾ 080-26944874
ಮೈಸೂರು ಕಚೇರಿ ದೂರವಾಣಿ ಸಂಖ್ಯೆ
: 8660105492 ಅಥವಾ 0821-2 21-2263255
ಕಲಬುರಗಿ ಕಚೇರಿ ದೂರವಾಣಿ ಸಂಖ್ಯೆ
: 9482114611 ಅಥವಾ 08472-230511
Key words: Free- Angioplasty- Workshop – Jayadeva Hospital – 200 poor patients.