ನವದೆಹಲಿ,ಜನವರಿ,2,2020(www.justkannada.in): ದೇಶದಾದ್ಯಂತ ಇಂದಿನಿಂದ ಕೊರೋನಾ ಲಸಿಕೆ ಡ್ರೈ ರನ್ ನಡೆಸಲಾಗುತ್ತಿದ್ದು, ಈ ನಡುವೆ ದೇಶದಲ್ಲಿ ಸುಮಾರು 30 ಕೋಟಿ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ವಿನೋದ್ ಪಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ವಿನೋದ್ ಪಾಲ್, ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿನ 30 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಅನಾರೋಗ್ಯಪೀಡಿತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಮುಂದಿನ 6 ರಿಂದ 8 ತಿಂಗಳವರೆಗೆ ಮುಖ್ಯವಾಗಿ ಆರೋಗ್ಯ ಕಾಳಜಿ ಕಾರ್ಯಕರ್ತರು ಮತ್ತು ವೃದ್ಧರನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗುತ್ತದೆ. ಪ್ರತಿ ಮೂಲೆಗೂ ಲಸಿಕೆ ಲಭ್ಯವಾಗುವಂತೆ ಪೂರೈಕೆ ಮಾಡಲು 31 ಹಬ್ ಗಳನ್ನು ಸ್ಥಾಪಿಸಲಾಗಿದ್ದು, 29,000 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಆರೋಗ್ಯ ಕಾರ್ಯಕರ್ತರನ್ನು ತಕ್ಷಣದ ಚುಚ್ಚುಮದ್ದು ಹಂತದಲ್ಲಿ ಪರಿಗಣಿಸಲಾಗುತ್ತದೆ. ಮೊದಲು 300 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗುತ್ತದೆ. ಇತರೆ ಗುಂಪುಗಳನ್ನು ಕೂಡ ಇದರೊಳಗೆ ಸೇರಿಸಿಕೊಳ್ಳಲು ಸರ್ಕಾರ ಗಮನ ಹರಿಸಿದೆ ಎಂದು ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ವಿನೋದ್ ಪಾಲ್ ತಿಳಿಸಿದರು.
Key words: Free -Corona vaccine -30 crore -people – country-Dr. Vinod Paul.
ENGLISH SUMMARY
Corona vaccination free of cost for 30 crore people in India – Dr. Vinod Paul
New Delhi, Jan. 02, 2020 (www.justkannada.in): The dry run for Corona vaccination has begun across the country today. In the meantime, Dr. Vinod Paul, Planning Commission member, and National COVID-19 task force head, has informed that the vaccination for Corona pandemic will be given free of cost for 30 crore people in India.
Sharing information about this Vinod Paul explained that the vaccination would be given for 30 crore people in the first phase covering all health workers and Coronavirus infected people. Preference would be given to health workers and elderly-people for the first 6 to 8 months. 31 hubs are established to supply the vaccination to every nook and corner, and 29,000 vaccination booths are established, he said.
Keywords: Vinod Paul/ COVID-19/ Coronavirus/ 30 crore people/ free of cost