ಬೆಂಗಳೂರು,ಡಿಸೆಂಬರ್,3,2021(www.justkannada.in): ಕೋವಿಡ್ 19 ಲಸಿಕೆ ತೆಗೆದುಕೊಂಡಿದ್ದೀರಾ? ಇಲ್ಲದಿದ್ದರೆ, ದಕ್ಷಿಣ ಬೆಂಗಳೂರಿನಲ್ಲಿ ತಕ್ಷಣವೇ ಉಚಿತ ಲಸಿಕೆಯನ್ನು ಪಡೆಯಲು ಇಲ್ಲಿ ಅವಕಾಶವಿದೆ.
ಮತ್ತೆ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳು ಮತ್ತು ಸುರಕ್ಷತೆಯ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಿ-ಲೈಫ್ ಆಸ್ಪತ್ರೆಯು ತಕ್ಷಣವೇ ನೋಂದಾಯಿಸಿಕೊಳ್ಳುವವರಿಗೆ ಉಚಿತ ಕೋವಿಡ್ -19 ಲಸಿಕೆಯನ್ನು ನೀಡಲು ನಿರ್ಧರಿಸಿದೆ.
ರೀ-ಲೈಫ್ ಬೆಂಗಳೂರಿನಲ್ಲಿ ಹೊಸ ಆಸ್ಪತ್ರೆಯಾಗಿದ್ದು, ನಗರದಲ್ಲಿ ವೈದ್ಯಕೀಯ ಸೇವೆಗಳನ್ನು ನೀಡುವ ವ್ಯವಸ್ಥೆಯನ್ನು ಬದಲಾಯಿಸಲು ಸಿದ್ಧವಾಗಿದೆ. ಆಸ್ಪತ್ರೆಯನ್ನು ನವೆಂಬರ್ 28 ರಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು. ಈ ಮಲ್ಟಿ-ಸ್ಪಷಾಲಿಟಿ ಆಸ್ಪತ್ರೆಯು ಬನಶಂಕರಿ 3ನೇ ಹಂತದಲ್ಲಿದೆ.
ಎರಡೂ ಲಸಿಕೆಗಳು, ಎರಡೂ ಡೋಸ್ ಗಳು
ರಿ-ಲೈಫ್ ಹಾಸ್ಪಿಟಲ್ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಡೋಸ್ ಎರಡನ್ನೂ ನೀಡುತ್ತಿದೆ. ಎರಡೂ ಲಸಿಕೆಗಳ ಮೊದಲ ಮತ್ತು ಎರಡನೆಯ ಡೋಸ್ ಅನ್ನು ಸಹ ನೀಡಲಾಗುತ್ತಿದೆ. ಐಡಿಗಾಗಿ ನಿಮ್ಮ ಆಧಾರ್ ಕಾರ್ಡ್ ನ್ನು ಒಯ್ದಿರಿ, ಮೊದಲ ಡೋಸ್ ತೆಗೆದುಕೊಂಡಿದ್ದರೆ, ನೀವು ದಿನಾಂಕ/ರಶೀದಿ/ಪ್ರಮಾಣಪತ್ರವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಜನರು ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಅಥವಾ ಅದರ ಬಗ್ಗೆ ಯಾವುದೇ ಭಯವನ್ನು ಹೊಂದಿರಬಾರದು ಎಂದು ರಿ-ಲೈಫ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಪ್ರಿಯಾ ತಿಳಿಸಿದ್ದಾರೆ.
ಹಠಾತ್ ಕೋವಿಡ್ ಏರಿಕೆ ಕಂಡುಬರುತ್ತಿರುವುದನ್ನು ಗಮನಿಸಿ, ಮುಂಚಿತವಾಗಿ ಲಸಿಕೆಯನ್ನು ಪಡೆಯುವ ಮೂಲಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಈಗಲೂ ತಡವಾಗಿಲ್ಲ, ಈ ಹಿಂದೆ ಕೋವಿಡ್ 19 ಲಸಿಕೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ ಜನರೂ ಮುಂದೆ ಬಂದು ತಮ್ಮ ಸ್ವಂತ ಆರೋಗ್ಯ, ತಮ್ಮ ಕುಟುಂಬ ಮತ್ತು ಸಮಾಜದ ಒಟ್ಟಾರೆ ಆರೋಗ್ಯದ ಕಾಳಜಿಯಿಂದ ಲಸಿಕೆಯನ್ನು ತೆಗೆದುಕೊಳ್ಳಬೇಕು, “ಎಂದು ಉಚಿತ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅವರು ಕರೆ ನೀಡಿದರು.
96060-21671 ನಂಬರ್ ಗೆ ಕರೆ ಮಾಡುವ ಮೂಲಕ ಉಚಿತ ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು.
ದಿನಾಂಕ: 1 ರಿಂದ 5ನೇ ಡಿಸೆಂಬರ್ 2021
ಸಮಯ: ಬೆಳಿಗ್ಗೆ 11 ರಿಂದ ಸಂಜೆ 7 (ಡಿಸೆಂಬರ್ 5 ರಂದು, ಶಿಬಿರವು ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ) ಸ್ಥಳ: ರಿ-ಲೈಫ್ ಆಸ್ಪತ್ರೆ, ಸಂಖ್ಯೆ 208 & 209, 100 ಫೀಟ್ ರಿಂಗ್ ರಸ್ತೆ, ಬನಶಂಕರಿ 3 ನೇ ಹಂತ, ಬೆಂಗಳೂರು 560 085
Key words: Free -Covid-19- Vaccine – Ri-Life Hospital.