ಮೈಸೂರು,ಜ,27,2020(www.justkannada.in): ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದ್ದ ವಕೀಲರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇದೀಗ ಮತ್ತೆ ನಳಿನಿ ಪರ ನಿಂತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಪರ ವಕಾಲತ್ತು ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಫ್ರೀ ಕಾಶ್ಮೀರ ಪ್ರಕರಣದಲ್ಲಿ ನಾನು ವಕಾಲತ್ತು ವಹಿಸುತ್ತಿಲ್ಲ. ಈ ಹಿಂದೆ ನನ್ನ ಲೈಸೆನ್ಸ್ ಅಮಾನತ್ತು ಮಾಡಿದ್ದರು. ಅಮಾನತ್ತು ತೆಗೆಯುವಂತೆ ಮಾತ್ರ ಅರ್ಜಿ ಸಲ್ಲಿಸಿದ್ದೇನೆಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಆದರೆ ಯುವತಿ ಪರ ಯಾರೇ ವಕಾಲತ್ತು ವಹಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದು ಈ ಮೂಲಕ ನಳಿನಿ ಪರ ವಕಾಲತ್ತು ಎಂಬ ಊಹಾಪೋಹಕ್ಕೆ ಟ್ವಿಟರ್ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ.
Key words: Free Kashmir -Play Card -Display Case- Former CM –Siddaramaiah- stands – Nalini