ಮೈಸೂರು,ಜ,10,2020(www.justkannada.in): ಮೈಸೂರು ವಿಶ್ವ ವಿದ್ಯಾನಿಲಯ ಆವರಣದಲ್ಲಿ ಫ್ರಿಕಾಶ್ಮೀರ್ ಪ್ಲೆ ಕಾರ್ಡ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ವಿವಿ ಕುಲ ಸಚಿವ ಆರ್.ಶಿವಪ್ಪ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
ಮೈಸೂರು ವಿಶ್ವ ವಿದ್ಯಾನಿಲಯ ಆವರಣದಲ್ಲಿ ಪ್ರತಿಭಟನೆ ವೇಳೆ ಫ್ರಿಕಾಶ್ಮೀರ್ ಪ್ಲೆ ಕಾರ್ಡ್ ಪ್ರದರ್ಶನದ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮೈಸೂರು ವಿಶ್ವ ವಿದ್ಯಾನಿಲಯಲಕ್ಕೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಮೈಸೂರು ವಿವಿ ಕುಲ ಸಚಿವ ಇಮೇಲ್ ಮೂಲಕ ರಾಜ್ಯಪಾಲರಿಗೆ ವರದಿ ನೀಡಿದ್ದಾರೆ. ಪ್ರತಿಭಟನೆಯ ಆಯೋಜನೆ ಉದ್ದೇಶ, ಸಂಘಟಕರ ವಿವರ, ವಿದ್ಯಾರ್ಥಿಗಳ ಮಾಹಿತಿ ಮತ್ತು ಮೈಸೂರು ವಿವಿಯಿಂದ ನೀಡಿರುವ ನೋಟೀಸ್ ಪ್ರತಿಯನ್ನ ವರದಿಯಲ್ಲಿ ನೀಡಿದ್ದಾರೆ. ಹಾಗೆಯೇ ಇದೇ ವರದಿಯನ್ನ ಸರ್ಕಾರಕ್ಕೂ ಸಲ್ಲಿಸಿದ್ದಾರೆ ಎನ್ನಲಾಗಿದೆ.
Key words: Free Kashmir- Play Card – Mysore VV – Registrar –Shivappa-report- govrnor