ಮೈಸೂರು,ಜ,27,2020(www.justkannada.in): ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಳಿನಿ ಹಾಗೂ ಮರಿದೇವಯ್ಯಗೆ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಳಿನಿ ಹಾಗೂ ಮರಿದೇವಯ್ಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಳಿನಿ ಬಾಲಕುಮಾರ್, ಹಾಗೂ ಮರಿದೇವಯ್ಯಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
8 ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 50 ಸಾವಿರ ಬಾಂಡ್, ಒಬ್ಬರು ಶ್ಯೂರಿಟಿ ಹಾಗೂ ಒಂದು ತಿಂಗಳ ಒಳಗೆ ಪಾಸಪೋರ್ಟ್ ಪೊಲೀಸರ ವಶಕ್ಕೆ ನೀಡುವಂತೆ ಸೂಚನೆ ನೀಡಿದೆ. ತನಿಖಾಧಿಕಾರಿಗೆ ಸಹಕಾರ ನೀಡುವುದು ಹಾಗೂ 15 ದಿನಕ್ಕೆ ಒಮ್ಮೆ ಪೋಲಿಸ್ ಠಾಣೆಗೆ ಹಾಜರಾಗಿ ಸಹಿಹಾಕುವಂತೆ ಕೋರ್ಟ್ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಪರ ವಕಾಲತ್ತು ಹಾಕದಂತೆ ಮೈಸೂರು ವಕೀಲರ ಸಂಘ ನಿರ್ಣಯ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಇತರೆಡೆಯಿಂದ ಆಗಮಿಸಿದ್ದ ವಕೀಲರು ನಳಿನಿ ಪರ ವಕಾಲತ್ತು ವಹಿಸಿದ್ದಾರೆ.
Key words: Free Kashmir -Playcard -Display Case-Nalini -Maridevaya – bail.