ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರವೆಲ್ಲಿದೆ..? ಮೈಸೂರು ವಕೀಲರ ಸಂಘದ ನಿರ್ಧಾರಕ್ಕೆ ಹೈಕೋರ್ಟ್ ಬೇಸರ…

ಬೆಂಗಳೂರು,ಜನವರಿ,21,2021(www.justkannada.in): ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರವನ್ನು ಪ್ರದರ್ಶನ  ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಂತೆ ನಿರ್ಬಂಧ ವಿಧಿಸಿದ್ದ ಮೈಸೂರು ವಕೀಲರ ಸಂಘದ ನಿರ್ಧಾರಕ್ಕೆ  ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.jk

ವಕೀಲರ ಸಂಘದ ನಿರ್ಧಾರವನ್ನು ಪ್ರಶ್ನಿಸಿ ವಕೀಲ ರಮೇಶ್ ನಾಯಕ್ ಪಿಐಎಲ್ ಹಾಕಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಓಕಾ ನೇತೃತ್ವದ ಹೈಕೋರ್ಟ್ ಮುಖ್ಯ ವಿಭಾಗೀಯ ನ್ಯಾಯ ಪೀಠ ಮೈಸೂರು ವಕೀಲರ ಸಂಘದ ನಿರ್ಧಾರಕ್ಕೆ  ಬೇಸರ ವ್ಯಕ್ತಪಡಿಸಿದೆ. ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರವೆಲ್ಲಿದೆ..? ಕಾನೂನಿನ ಅಡಿಯಲ್ಲಿ ಇಂತಹ ನಿರ್ಣಯ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಈ ಸಂಬಂಧ ಸಂಘದಿಂದ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದಾರೆ.

ಹಾಗೆಯೇ ವಕೀಲರಾಗಿರುವ ನೀವು ಕೂಡ ಓರ್ವ ಕೋರ್ಟ್ ಅಧಿಕಾರಿಯಾಗಿದ್ದೀರಾ. ಆರೋಪಿ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವುದು ಸರಿಯೇ.? ವಕೀಲರ ಸಂಘಗಳು ಇಂತಹ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಎ.ಎಸ್ ಓಕ ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವುಗಳ ನಿಯಂತ್ರಿಸಲು ಭಾರತೀಯ ವಕೀಲರ ಪರಿಷತ್ತು ಮುಂದಾಗಬೇಕು ಸಲಹೆ ನೀಡಬೇಕು ಎಂದು ತಿಳಿಸಿದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೈಸೂರು ವಕೀರ ಸಂಘ ಕಾಲಾವಕಾಶ ಕೇಳಿತು.  ಬಳಿಕ ಫೆ.12 ರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ  ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನಲೆ…

ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಕೆಲ ವಿದ್ಯಾರ್ಥಿಗಳು ಮೈಸೂರು ವಿವಿ ಆವರಣದಲ್ಲಿ 2020ರ ಜನವರಿ 8ರಂದು ಪ್ರತಿಭಟನೆ  ನಡೆಸಿದ್ದರು. ಈ ವೇಳೆ ಆರೋಪಿ ವಿದ್ಯಾರ್ಥಿ ನಳಿನಿ ಫ್ರೀ ಕಾಶ್ಮೀರ್’ ಭಿತ್ತಿಪತ್ರ ಪ್ರದರ್ಶಿಸಿದ್ದರು. ನಂತರ ನಳಿನಿ ಬಾಲಕುಮಾರ್ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.free Kashmir-playcard- restrain -accused -advocating -High Court -Mysore Lawyers Association.

ಇದಾದ ಬಳಿಕ ನಳಿನಿ ಪರ ಯಾರೊಬ್ಬ ವಕೀಲರೂ ವಕಾಲತ್ತು ವಹಿಸಬಾರದೆಂದು ಜನವರಿ 16ರಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿತ್ತು. ಮೈಸೂರು ಜಿಲ್ಲಾ ವಕೀಲರ ಸಂಘದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ ಗೆ ನಿರ್ದೇಶಿಸಬೇಕು ಎಂದು ರಮೇಶ್ ನಾಯಕ್  ಎಂಬುವವರು ಅರ್ಜಿ ಸಲ್ಲಿಸಿದ್ದರು.

ENGLISH SUMMARY….

HC expresses displeasure on Mysore Bar Association decision
Mysuru, Jan. 21, 2021 (www.justkannada.in): The High Court of Karnataka has expressed its displeasure on the decision of the Mysore Bar Association on restricting taking up of the case of Nalini Balakumar, who is facing accusation charges of displaying a poster with a message ‘Free Kashmir.’HC expresses displeasure on Mysore Bar Association decision Mysuru, Jan. 21, 2021 (www.justkannada.in): The High Court of Karnataka has expressed its displeasure on the decision of the Mysore Bar Association on restricting taking up of the case of Nalini Balakumar, who is facing accusation charges of displaying a poster with a message 'Free Kashmir.' Advocate Ramesh Nayak had filed a PIL in the High Court against the Mysore Bar Association's decision. The Hon'ble High Court Division bench, led by Justice S.K. Oka heard the case and has expressed its displeasure. It has questioned where is the power to restrict not to take up the case representing an accused person? Under which law have you taken this decision? The advocates have informed the High Court that they would submit the details by obtaining more information from the Association. Keywords: Mysore Bar Association/ High Court
Advocate Ramesh Nayak had filed a PIL in the High Court against the Mysore Bar Association’s decision. The Hon’ble High Court Division bench, led by Justice S.K. Oka heard the case and has expressed its displeasure. It has questioned where is the power to restrict not to take up the case representing an accused person? Under which law have you taken this decision? The advocates have informed the High Court that they would submit the details by obtaining more information from the Association.
Keywords: Mysore Bar Association/ High Court

Key words:  free Kashmir-playcard- restrain -accused -advocating -High Court -Mysore Lawyers Association.