ಮೈಸೂರು,ಸೆಪ್ಟಂಬರ್,23,2020 (www.justkannada.in): ಫಿಟ್ ಇಂಡಿಯಾ ಯೋಜನೆಯಡಿ ಫಿಟ್ ಮೈಸೂರು ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಡಿ ಜಿಮ್ ಗಳಲ್ಲಿ ಮೂರು ದಿನಗಳ ಕಾಲ ಉಚಿತ ಪ್ರವೇಶ ನೀಡಿ ವಿವಿಧ ವ್ಯಾಯಾಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಜಿಮ್ ಮತ್ತು ಫಿಟ್ ನೆಸ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಚಿತ್ರ ನಟ ಜಿಮ್ ರವಿ ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರ ನಟ ಜಿಮ್ ರವಿ, ಮೈಸೂರು ಜಿಮ್ ಮತ್ತು ಫಿಟ್ ನೆಸ್ ಮಾಲೀಕರ ಸಂಘದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫಿಟ್ ನೆಸ್ ಗಾಗಿ ಸಂಘದ ವ್ಯಾಪ್ತಿಗೆ ಬರುವ ಮೈಸೂರಿನ 170 ಕ್ಕೂ ಹೆಚ್ಚು ಜಿಮ್ ಗಳಲ್ಲಿ ಉಚಿತ ಪ್ರವೇಶ ನೀಡಿ ವಿವಿಧ ವ್ಯಾಯಾಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಂದಿನಿಂದ ಮೂರು ದಿನಗಳ ಕಾಲ ಮೈಸೂರಿನ ಹಲವು ಜಿಮ್ ಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆಸಕ್ತ ಯುವಕರು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಫಿಟ್ ಮೈಸೂರು ಯೋಜನೆಯಡಿ ಜಿಮ್ ಗಳಲ್ಲಿ ಮೂರು ದಿನಗಳ ಕಾಲ ಉಚಿತ ಪ್ರವೇಶ ನೀಡಿ ವಿವಿಧ ವ್ಯಾಯಾಮಗಳ ಬಗ್ಗೆ ತರಬೇತಿ ನೀಡಲಾಗುವುದು. ಮೂರು ದಿನಗಳ ನಂತರ ತಮಗಿಷ್ಟವಾದ ವ್ಯಾಯಾಮಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಇನ್ನು ಜಿಮ್ ಗಳಲ್ಲಿ ಮಾದಕ ವಸ್ತು ಬಳಕೆಗೆ ನನ್ನ ವಿರೋಧವಿದೆ. ಈ ಬಗ್ಗೆ ಯುವಕರಿಗೆ ನಿರಂತರವಾಗಿ ಅರಿವು ಮೂಡಿಸುತ್ತಿದ್ದೇನೆ ಎಂದು ಜಿಮ್ ರವಿ ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ತಲೆದುರಿರುವುದು ದುರದೃಷ್ಟಕರ…
ಸ್ಯಾಂಡಲ್ವುಡ್ ನಲ್ಲಿ ಡ್ರಗ್ಸ್ ಕುರಿತು ಪ್ರತಿಕ್ರಿಯಿಸಿದ ಬಿಗ್ ಬಾಸ್ ಖ್ಯಾತಿಯ ಜಿಮ್ ರವಿ, ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ತಲೆದುರಿರುವುದು ದುರದೃಷ್ಟಕರ. ಕೇವಲ ಚಿತ್ರರಂಗ ಮಾತ್ರವಲ್ಲ. ರಾಜಕಾರಣಿಗಳ ಮಕ್ಕಳು ಉದ್ಯಮಿಗಳ ಮಕ್ಕಳು ಎಲ್ಲರೂ ಇದರಲ್ಲಿ ಇರಬಹುದು. ಸಮಾಜದಲ್ಲಿ ಒಳ್ಳೆಯ ಹೆಸರು ಹಾಗೂ ಹಣ ಮಾಡಿದವರನ್ನೇ ಈ ಪೆಡ್ಲರ್ ಗಳು ಟಾರ್ಗೆಟ್ ಮಾಡ್ತಾರೆ. ರಾಗಿಣಿ ,ಸಂಜನಾ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಅವರು ಮಾಡಿರುವುದು ತಪ್ಪೇ ಆದರೆ ಉದ್ದೇಶ ಪೂರ್ವಕವಾಗಿ ಮಾಡಿಲ್ಲ ಎಂದರು.
ಎಲ್ಲರೂ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡಿ ನಾವು ಕಲಿಯಬೇಕು. ಅವರ ಚಿತ್ರಗಳೇ ನಮಗೆ ಮಾದರಿ.ಡ್ರಗ್ಸ್ ವಿಚಾರದಲ್ಲಿ ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಡ್ರಗ್ಸ್ ಬುಡ ಸಮೇತ ಕಿತ್ತುಹಾಕಿ ದೇಶದಿಂದ ತೊಲಗಿಸಬೇಕು ಎಂದು ಜಿಮ್ ರವಿ ಹೇಳಿದರು.
Key words: Free -training – three days – gyms – Fit Mysore program- film actor -Jim Ravi.