ನವದೆಹಲಿ,ಜೂನ್,7,2021(www.justkannada.in): ಜೂನ್ 21 ರಿಂದ ದೇಶದ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು. ಹಾಗೆಯೇ ನವೆಂಬರ್ ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದರು.
ದೇಶದ ಜನರನ್ನುದ್ದೇಶಿಸಿ ಇಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಉಚಿತ ಲಸಿಕೆ ನೀಡುತ್ತೆ. ಮುಂದಿನ 2 ವಾರದ ಬಳಿಕ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಲಸಿಕೆ ನೀಡುತ್ತದೆ. ದೇಶದ ಎಲ್ಲ ಜನರಿಗೂ ಕೇಂದ್ರದಿಂದ ಉಚಿತ ಲಸಿಕೆ ನೀಡಲಾಗುತ್ತದೆ ಎಂದರು.
ಇನ್ನು ನವೆಂಬರ್ ವರೆಗೂ ಬಡವರಿಗೆ ಉಚಿತ ಆಹಾರಧಾನ್ಯ ನೀಡಲಾಗುತ್ತದೆ. ದೇಶದ 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ವಿತರಣೆ ಮಾಡುತ್ತೇವೆ. ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲಬಾರದು ಎಂಬುದು ಇದರ ಉದ್ದೇಶ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕೊರೊನಾದಿಂದಾಗಿ ನಮ್ಮಜತೆಗಿದ್ದ ಹಲವರನ್ನ ಕಳೆದುಕೊಂಡಿದ್ದೇವೆ. ನಮ್ಮಲ್ಲಿ ಅನೇಕರು ಪರಿವಾರದವರನ್ನ ಕಳೆದುಕೊಂಡಿದ್ದಾರೆ. ಅಧುನಿಕ ಜಗತ್ತು ಈ ಹಿಂದೆ ಇಂತಹ ಸಂಕಷ್ಟಕ್ಕೆ ಸಿಲುಕಿರಲಿಲ್ಲ. ಕಳೆದ 100 ವರ್ಷಗಳಲ್ಲಿ ಇಂದು ದೊಡ್ಡ ಸಾಂಕ್ರಾಮಿಕ ರೋಗ. ಭಾರತ ತನ್ನ ಶಕ್ತಿಯನ್ನು ಮೀರಿ ಕೊರೋನಾ ವಿರುದ್ಧ ಹೋರಾಡಿದೆ. ಕೊರೋನಾ ಅನ್ನೋದು ಇಡಿ ಜಗತ್ತನ್ನೇ ಕಂಗೆಡಿಸಿದೆ. ಇಷ್ಟೊಂದು ಆಕ್ಸಿಜನ್ ಅನಿವಾರ್ಯತೆ ಇದೇ ಮೊದಲು. ಕೊರೋನಾ ಈ ಶತಮಾನದ ಅತಿದೊಡ್ಡ ಮಾರಿ. ಐಸಿಯು ವೆಂಟಿಲೇಟರ್ ಬೆಡ್ ಗಳ ಹೆಚ್ಚಳ ಮಾಡಿದ್ದೇವೆ. ಹೊಸ ಆರೋಗ್ಯ ಮೂಲ ಸೌಕರ್ಯ ಮಾಡಲಾಗಿದೆ.
ಬೇಡಿಕೆ ಈಡೇರಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದೇವೆ. ಆಕ್ಸಿಜನ್ ರೈಲು ವಿಮಾನ ಮೂಲಕ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದೇವೆ. ಅಗತ್ಯವಿರುವ ಔಷಧಗಳ ಉತ್ಪಾದನೆ ಹೆಚ್ಚಳವಾಗಿದೆ. ಕೋವಿಡ್ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ. ವಿದೇಶದಲ್ಲಿ ಲಸಿಕೆ ಉತ್ಪಾದನೆಯಾದ್ರೂ ನಮಗೆ ಲಸಿಕೆ ಸಿಗಲಿಲ್ಲ. ನಮ್ಮ ದೇಶದಲ್ಲಿ ಉತ್ಪಾದನೆಯಾಗಿದ್ದರಿಂದ ಹಲವು ಜೀವಗಳು ಉಳಿದವು. ನಾವು ಮಕ್ಕಳನ್ನ ಕೋವಿಡ್ ನಿಂದ ರಕ್ಷಿಸಲು ಲಸಿಕೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: Free vaccine -everyone – June 21st-Free food – Prime Minister- Modi