ಕಲ್ಬುರ್ಗಿ,ಮೇ,6,2022(www.justkannada.in): ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಅಕ್ರಮದ ಹಿಂದೆ ಯಾರೇ ಇದ್ದರೂ ಬಿಡಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಡಿವೈಎಸ್ಪಿ ಸೇರಿ ಹಲವರನ್ನ ಬಂಧಿಸಲಾಗಿದೆ. ಅನೈತಿಕ ಮಾರ್ಗ ಬಳಸಿದರೇ ಉಳಿಗಾಲ ಇಲ್ಲ ಅಕ್ರಮವಾಗಿ ಹಣ ಮಾಡಲು ಹೋದರ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಪಿಎಸ್ ಐ ಅಕ್ರಮ ಹೇಸಿಗೆ ಮೂಡಿಸುತ್ತಿದೆ. ಅಕ್ರಮದ ಹಿಂದೆ ಯಾರು ಇದ್ದರೂ ಹುಡುಕುತ್ತೇವೆ. ಸಾಧಕರಿಗೆ ಅನ್ಯಾಯ ಆಗಬಾರದು. ತನಿಖಾ ತಂಡಕ್ಕೆ ಫ್ರಿಹ್ಯಾಂಡ್ ನೀಡಿದ್ದೇವೆ. ಪ್ರಕರಣದ ಹಿಂದೆ ಯಾರೇ ಇದ್ದರೂ ಬಿಡಲ್ಲ. ಕೆಲವರಿಂದಾಗಿ ಪರೀಕ್ಷೆ ರದ್ಧು ಮಾಡಲಾಗಿದೆ ಎಂದರು.
Key words: freehand – investigative- team-Home Minister-Araga Jnanendra.