ಚಾಕುವಿನಿಂದ ಇರಿದು ಗೆಳೆಯನನ್ನೇ ಹತ್ಯೆ ಮಾಡಿದ ಸ್ನೇಹಿತರು

ಮೈಸೂರು,ಏಪ್ರಿಲ್,1,2025 (www.justkannada.in): ಪಾರ್ಟಿ ಮಾಡುವಾಗ ಕುಡಿದ ಮತ್ತಿನಲ್ಲಿ ಗೆಳೆಯರು ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರುದು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸಿಪುರ ತಾಲ್ಲೂಕು ಬನ್ನೂರಿನಲ್ಲಿ ನಡೆದಿದೆ.

23 ವರ್ಷದ ಯುವಕ ವರುಣ್ ಕೊಲೆಯಾದ ವ್ಯಕ್ತಿ.  ಪೋಷಕ್ ಹಾಗೂ ಇತರರು ಕೊಲೆ ಮಾಡಿರುವ ಆರೋಪಿಗಳು. ವರುಣ್ ಪೋಷಕ್ ಸೇರಿ ಸ್ನೇಹಿತರು ತಡರಾತ್ರಿ ಪಾರ್ಟಿ ಮಾಡುತ್ತಾ ಕುಳಿತಿದ್ದು, ಈ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಮನೆಗೆ ಹೋಗುವಾಗ ವರುಣ್ ಗೆ ಪೋಷಕ್, ಹಾಗೂ ಆತನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿಎ.

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾರೆ ಯಾವ ದ್ವೇಷವೂ ಇಲ್ಲ. ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಕೊಲೆ ಮಾಡಿರುವ ನಾಲ್ಕು ಜನ ಆರೋಪಿಗಳನ್ನ ಬಂಧಿಸುವಂತೆ  ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ನೇಹಿತನ ಬೆನ್ನಿಗೆ ನಿಲ್ಲಬೇಕಿದ್ದ ಸ್ನೇಹಿತರೇ ಇಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ.

Key words: Friends, murder, friend, Mysore