ಮೈಸೂರು,ಜನವರಿ,20,2024(www.justkannada.in): ಜನವರಿ 22 ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ, ರಾಮಲಲ್ಲಾ ಪ್ರಾಣ ಪ್ರತಿಷ್ಟೆ ಕಾರ್ಯ ಜರುಗಲಿದ್ದು ಕೋಟ್ಯಾಂತರ ರಾಮಭಕ್ತರು ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀರಾಮನಿಗೆ ಪ್ರಿಯವಾದ ಮೋತಿಚೂರ್ ಲಡ್ಡುವನ್ನ ತಯಾರಿಸಲಾಗಿದೆ. ಮೈಸೂರಿನ ಆಲಮ್ಮ ಛತ್ರದಲ್ಲಿ ರಾಮಭಕ್ತರು ಒಂದು ಲಕ್ಷದ ಎಂಟು ಸಾವಿರ ಲಡ್ಡು ತಯಾರಿಸಿದ್ದು ಜ.22 ರಂದು ಮೈಸೂರಿನ ರಾಮಮಂದಿರಗಳ ಬಳಿ ಹಂಚಲು ಸಿದ್ದತೆ ನಡೆಸಿದ್ದಾರೆ.
60 ಕ್ಕೂ ಹೆಚ್ಚು ಮಂದಿ 5700 KG ಪದಾರ್ಥಗಳನ್ನ ಹಾಕಿ ಲಡ್ಡು ತಯಾರಿಸಿದ್ದಾರೆ. ಲಡ್ಡುಗೆ ಗೋಡಂಬಿ, ದ್ರಾಕ್ಷಿ, ಕೇಸರಿ, ಸಕ್ಕರೆ, ಕಡ್ಲೆ ಇಟ್ಟು, ತುಪ್ಪ, ಎಣ್ಣೆ 3200 kg ಸಕ್ಕರೆ, ಕಡ್ಲೆ ಇಟ್ಟು 1.500 KG ಬಳಕೆ ಮಾಡಲಾಗಿದೆ. ಅಂದು ಅರಮನೆ ಮುಂಭಾಗದ ಕೋಟೆ ಆಂಜನೇಯ ,ಚಿಕ್ಕಆಂಜನೇಯ ಸ್ವಾಮಿ, ಪಂಚಮುಖಿ ಆಂಜನೇಯಸ್ವಾಮಿ, ಶ್ರೀರಾಮಮಂದಿರ ಸೇರಿ ಹಲವಡೆ ಈ ಲಡ್ಡುವನ್ನ ಹಂಚಿಕೆ ಮಾಡಲಾಗುತ್ತದೆ.
Key words: 1.8 lakh -laddus -prepared – Sri Rama -devotees – Mysore.