ಬೆಂಗಳೂರು,ಅಕ್ಟೋಬರ್,30,2023(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ.
ನಗರದ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಪ್ರತ್ಯಕ್ಷ ಹಿನ್ನೆಲೆ ಬೊಮ್ಮನಹಳ್ಳಿ ಹೆಚ್ಎಸ್ ಆರ್ ಲೇಔಟ್ ಬಿಟಿಎಂ ಲೇಔಟ್ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು, ಜನರು ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಚಿರತೆ ಸೆರೆಗಾಗಿ K.R.ಪುರಂ ಅರಣ್ಯಾಧಿಕಾರಿಗಳು ಸಿಂಗಸಂದ್ರ ಲೇಔಟ್ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೀದಿ ನಾಯಿಗಳು ಚಿರತೆಯನ್ನು ನೋಡಿ ಅದನ್ನು ಓಡಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಾಗೆಯೇ ಅಪಾರ್ಟ್ ಮೆಂಟ್ ವೊಂದರ ಒಳಗೆ ಚಿರತೆ ಓಡಾಡಿದ್ದು ಈ ದೃಶ್ಯವೂ ಸೆರೆಯಾಗಿದೆ. ಚಿರತೆ ಪ್ರತ್ಯಕ್ಷದಿಂದ ಜನತೆ ಬೆಚ್ಚಿಬಿದ್ದಿದ್ದು ಇದೀಗ ನಿದ್ದೆಗೆಡಿಸಿದ ಚಿರತೆ ಸೆರೆಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
Key words: Leopard – Bangalore-Anxiety – people