ಬೆಂಗಳೂರು,ನವೆಂಬರ್,25,2023(www.justkannada.in): ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಪ್ರಾಂಜಲ್ ಗೆ ಸೇನಾ ಗೌರವ ವಂದನೆ ಸಲ್ಲಿಸಲಾಯಿತು.
ಬೆಂಗಳೂರು ನಂದನವನ ಲೇಔಟ್ ನ ನಿವಾಸದಲ್ಲಿ ಹುತಾತ್ಮ ಯೋಧ ಪ್ರಾಂಜಲ್ ಅವರ ಪಾರ್ಥೀವ ಶರೀರವನ್ನ ಅಂತಿಮದರ್ಶನಕ್ಕೆ ಇಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಗಣ್ಯಾತಿಗಣ್ಯರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ನಂದನವನ ಬಡಾವಣೆಯಿಂದ 22ಕಿ. ಮೀವರೆಗೆ ಯೋಧ ಪ್ರಾಂಜಲ್ ಅವರ ಅಂತಿಮಯಾತ್ರೆ ನಡೆಯಲಿದ್ದು ಆನೇಕಲ್ ತಾಲ್ಲೂಕಿನ ಸೋಮಸುಂದರಪಾಳ್ಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
Key words: Martyr-soldier- Pranjal- Army – tribute – bangalore