ಕೊಪ್ಪಳ,ಸೆಪ್ಟೆಂಬರ್,19,2020(www.justkannada.in) : ಕೊಪ್ಪಳದಲ್ಲಿ ಮಳೆಯಿಂದಾಗಿ ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುವ ಸ್ಥಿತಿ ಎದುರಾಗಿದೆ.
ಒಂದು ಕಡೆ ಕೊರೋನಾ ಹಾವಳಿಯಾದರೆ, ಮತ್ತೊಂದೆಡೆ ಮಳೆಯು ದೊಡ್ಡ ಸಮಸ್ಯೆ ಎನ್ನುವಂತ್ತಾಗಿದೆ. ಕೊರೋನ ಸೋಂಕಿಗೆ ತುತ್ತಾಗಿ ಮೃತಪಟ್ಟವರನ್ನು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುವುದಕ್ಕೆ ಆರೋಗ್ಯ ಸಿಬ್ಬಂದಿ ಪರದಾಡುವಂತವಾಗಿದೆ.
ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆರಾಯನ ಆರ್ಭಟದಿಂದ ಶವಾಗಾರದಲ್ಲಿ ನೀರು ನಿಂತಿದ್ದು, ಕೊಪ್ಪಳದ ಗವಿಮಠದ ಹಿಂಭಾಗದಲ್ಲಿರುವ ಶವಸಂಸ್ಕಾರ ಸ್ಥಳದಲ್ಲಿಯೂ ನೀರು ನಿಂತಿದ್ದು, ನೀರಿನಲ್ಲಿಯೇ ನಿಂತು ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ರೀತಿ ಅವ್ಯವಸ್ಥೆ ಕಂಡು ಬಂದರೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ.
key words : funeral-deceased-Corona-Rainfall-disruption